HomeLatest NewsBREAKING NEWS: ಗ್ರೇಟರ್ ಬೆಂಗಳೂರು ಅಡಿ 5 ಪಾಲಿಕೆಗಳ ರಚನೆ, ವಿಭಾಗ, ಗಡಿ ಗುರುತು ಮಾಡಿ...

BREAKING NEWS: ಗ್ರೇಟರ್ ಬೆಂಗಳೂರು ಅಡಿ 5 ಪಾಲಿಕೆಗಳ ರಚನೆ, ವಿಭಾಗ, ಗಡಿ ಗುರುತು ಮಾಡಿ ಸರ್ಕಾರ ಆದೇಶ

ಬೆಂಗಳೂರು: ಗ್ರೇಟರ್ ಬೆಂಗಳೂರು ಐದು ವಿಭಾಗಗಳಾಗಿ ವಿಂಗಡಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಾಗಿ ರಾಜ್ಯ ಸರ್ಕಾರ ವಿಂಗಡಿಸಿದೆ.

ಐದು ಮಹಾನಗರ ಪಾಲಿಕೆಗಳ ಗಡಿ ಗುರುತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಪಾಲಿಕೆಯ ಕೇಂದ್ರ ಕಚೇರಿ ಜಿಬಿಎ ಕೇಂದ್ರ ಕಚೇರಿಯಾಗಿ ಮಾರ್ಪಾಡು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಬಿಎಂಪಿ ಬದಲು ಜಿಬಿಎ ಜಾರಿಗೊಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಆಗಸ್ಟ್ 11ರಂದು ಅಧಿವೇಶನದಲ್ಲಿ ಐದು ಮಹಾನಗರ ಪಾಲಿಕೆಗಳ ವಿಚಾರ ಚರ್ಚಿಸಲಾಗುವುದು. ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲು ರಾಜ್ಯ ಸರ್ಕಾರದಿಂದ ತಯಾರಿ ಮಾಡಿಕೊಳ್ಳಲಾಗಿದೆ. ವಿಭಾಗಗಳ ಬಗ್ಗೆ ಅಕ್ಷೇಪಣೆಗಳಿದ್ದಲ್ಲಿ ಸಲಹೆ ನೀಡಲು ಪಾಲಿಕೆ ಸೂಚನೆ ನೀಡಿದೆ. ಸಾರ್ವಜನಿಕರ ಸಲಹೆ ಪಡೆಯುವಂತೆ ಬಿಬಿಎಂಪಿ ಸೂಚನೆ ನೀಡಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular