HomeKarnatakaBREAKING NEWS: ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಕ್ಕೆ DGCA ಗ್ರೀನ್‌ ಸಿಗ್ನಲ್‌ʼ; ಇಂದಿನಿಂದಲೇ ‌ʼಟ್ರಯಲ್‌ ರನ್ʼ...

BREAKING NEWS: ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಕ್ಕೆ DGCA ಗ್ರೀನ್‌ ಸಿಗ್ನಲ್‌ʼ; ಇಂದಿನಿಂದಲೇ ‌ʼಟ್ರಯಲ್‌ ರನ್ʼ ಶುರು

ಫೆ.27 ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಶಿವಮೊಗ್ಗದ ನೂತನ ವಿಮಾನ ನಿಲ್ದಾಣಕ್ಕೆ ಕಳೆದ ರಾತ್ರಿ ವಿಮಾನಯಾನ ಪ್ರಾಧಿಕಾರದ ವತಿಯಿಂದ ಲೈಸೆನ್ಸ್ ಸಿಕ್ಕಿದೆ.

ವಿಮಾನ ನಿಲ್ದಾಣ ಆರಂಭಕ್ಕೆ ಡಿಜಿಸಿಎ ಅನುಮತಿ ಸಿಕ್ಕಿರುವ ಹಿನ್ನಲೆಯಲ್ಲಿ ಇಂದಿನಿಂದಲೇ ಟ್ರಯಲ್‌ ರನ್‌ ಆರಂಭವಾಗಲಿದೆ ಎಂದು ಹೇಳಲಾಗಿದ್ದು, ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಈ ಕುರಿತಂತೆ ಮಾತನಾಡಿರುವ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ಇಂದಿನಿಂದ ಟ್ರಯಲ್‌ ರನ್‌ ನಡೆಯಲಿರುವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಯಾರಿಗೂ ಸಹ ಪ್ರವೇಶವಿರುವುದಿಲ್ಲ. ಸಂಸದನಾಗಿರುವ ತಮಗೂ ಈ ನಿಯಮ ಅನ್ವಯಿಸುತ್ತದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular