HomeCrimeಈ ಮಹಿಳೆ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದೆಲ್ಲಿ ಎಂದು ತಿಳಿದ್ರೆ ಶಾಕ್ ಆಗ್ತೀರಾ....!

ಈ ಮಹಿಳೆ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದೆಲ್ಲಿ ಎಂದು ತಿಳಿದ್ರೆ ಶಾಕ್ ಆಗ್ತೀರಾ….!

ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ವಿವಿಧ ತಂತ್ರಗಳಿಗೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅಪಾಯಕಾರಿ ವಿಧಾನಗಳನ್ನು ಸಹ ಅನುಸರಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆಗಳು ನಡೆದಿದ್ದವು.

ಇದೀಗ ಘಟನೆಯೊಂದರಲ್ಲಿ ಬ್ಯಾಂಕಾಕ್ ನಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆಯೊಬ್ಬರು ತಮ್ಮ ಗುದದ್ವಾರದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದು, ಇದೀಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

17.76 ಲಕ್ಷ ರೂಪಾಯಿ ಮೌಲ್ಯದ 314.47 ಗ್ರಾಂ ಚಿನ್ನವನ್ನು ಕ್ಯಾಪ್ಸೂಲ್ ಮಾದರಿಯಲ್ಲಿ ಪೇಸ್ಟ್ ರೂಪದ ಮೂಲಕ ಗುದದ್ವಾರದಲ್ಲಿ ಅಡಗಿಸಿಕೊಂಡಿದ್ದರು. ಅನುಮಾನದ ಮೇರೆಗೆ ಮಹಿಳೆಯ ವಿಚಾರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಸತ್ಯ ಬಾಯ್ಬಿಡಿಸಿದ್ದಾರೆ. ಇದೀಗ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular