ಕಲಬುರಗಿ: ಜಾಮಿನಿನ ಮೇಲೆ ಹೊರಬಂದಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ರೇವಣಸಿದ್ದಪ್ಪ ತಳಕೇರಿ(26) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ರೇವಣಸಿದ್ದಪ್ಪ ಶವ ಪತ್ತೆಯಾಗಿದೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಹುಲಸಗೂಡ ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ಶವವಾಗಿ ಪತ್ತೆಯಾಗಿರುವ ರೇವಣಸಿದ್ದಪ್ಪ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರೀತಿಸಿ ಮದುವೆಯಾಗಿದ್ದ ರೇವಣಸಿದ್ದಪ್ಪ ತಳಕೇರಿ ಪೋಕ್ಸೊ ಕೇಸ್ ನಲ್ಲಿ ಜೈಲು ಸೇರಿದ್ದ. ಎರಡು ವಾರಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ರೇವಣಸಿದ್ದಪ್ಪ ಶವವಾಗಿ ಪತ್ತೆಯಾಗಿದ್ದಾನೆ. ರಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

