HomeLatest NewsBREAKING: 24 ಮನೆ, 40 ಎಕರೆ ಜಮೀನು… ದಿನಗೂಲಿ ನೌಕರನ ಆಸ್ತಿ ಕಂಡು ದಂಗಾದ್ರು ದಾಳಿ...

BREAKING: 24 ಮನೆ, 40 ಎಕರೆ ಜಮೀನು… ದಿನಗೂಲಿ ನೌಕರನ ಆಸ್ತಿ ಕಂಡು ದಂಗಾದ್ರು ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು

ಕೊಪ್ಪಳ: KRIDL ದಿನಗೂಲಿ ನೌಕರರ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕರ ಕಳಕಪ್ಪ ನಿಡಗುಂದಿ ಮನೆಯಲ್ಲಿ ಪರಿಶೀಲನೆ ಅಂತ್ಯವಾಗಿದೆ.

ಕೊಪ್ಪಳದಲ್ಲಿ ಬರೋಬ್ಬರಿ 24 ಮನೆ ಹೊಂದಿರುವ ದಿನಗೂಲಿ ನೌಕರ ಕಳಕಪ್ಪ ನಿಡಗುಂದಿ ಆಸ್ತಿಪಾಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಕಳಕಪ್ಪ 24 ಮನೆ, 4 ನಿವೇಶನ, 40 ಎಕರೆ ಕೃಷಿ ಜಮೀನು, 350 ಗ್ರಾಂ ಚಿನ್ನಾಭರಣ ಹೊಂದಿರುವುದು ಗೊತ್ತಾಗಿದೆ. ಒಂದೂವರೆ ಕೆಜಿ ಬೆಳ್ಳಿ ಆಭರಣ, ಎರಡು ಬೈಕ್, ಎರಡು ಕಾರು ಕಳಕಪ್ಪ ಬಳಿ ಪತ್ತೆಯಾಗಿದೆ.

ಕಳಕಪ್ಪ, ಅವರ ಪತ್ನಿ ಹೆಸರಲ್ಲಿ 6 ಮನೆ, ಎರಡು ನಿವೇಶನ, 40 ಎಕರೆ ಜಮೀನು ಇದೆ. ಬೇನಾಮಿಯಾಗಿ ಅವರ ಹೆಂಡತಿ ತಮ್ಮನ ಹೆಸರಿನಲ್ಲಿ ಎಂಟು ಮನೆ, ಎರಡು ನಿವೇಶನ, ಸ್ವಂತ ಸಹೋದರನ ಹೆಸರಲ್ಲಿ 10 ಮನೆ, ವಿವಿಧ ಬ್ಯಾಂಕ್ ದಾಖಲೆ ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಗೂಲಿ ನೌಕರನಾಗಿ 15 ಸಾವಿರ ಸಂಬಳ ಪಡೆಯುತ್ತಿದ್ದ ಕಳಕಪ್ಪ ಇಷ್ಟೆಲ್ಲಾ ಆಸ್ತಿ ಮಾಡಿರುವ ಬಗ್ಗೆ ದಾಖಲೆ ಸಂಗ್ರಹಿಸಿರುವ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular