HomeLatest NewsBREAKING: ಲಿಂಗನಮಕ್ಕಿ ಡ್ಯಾಂ ಗೇಟ್ ಓಪನ್: ಶರಾವತಿ ನದಿಗೆ 3500 ಕ್ಯುಸೆಕ್ ನೀರು ಬಿಡುಗಡೆ

BREAKING: ಲಿಂಗನಮಕ್ಕಿ ಡ್ಯಾಂ ಗೇಟ್ ಓಪನ್: ಶರಾವತಿ ನದಿಗೆ 3500 ಕ್ಯುಸೆಕ್ ನೀರು ಬಿಡುಗಡೆ

ಶಿವಮೊಗ್ಗ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಹಾಗೂ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹಾಗೂ ಇತರೆ ಮುಖಂಡರು  ಭಾನುವಾರ ಲಿಂಗನಮಕ್ಕಿ ಜಲಾಶಯದ ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

5 ಗೇಟ್ ಗಳನ್ನು ತೆರೆದು 3500 ಕ್ಯುಸೆಕ್ ನೀರನ್ನು‌ ಶರಾವತಿ ನದಿಗೆ ಬಿಡಲಾಗಿದೆ. ಗೇಟ್ ಗಳನ್ನು ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವರು ಮಾತನಾಡಿ, 5 ಗೇಟ್ ಗಳ‌ ಮೂಲಕ ಸುಮಾರು 3500 ಕ್ಯುಸೆಕ್ ನೀರನ್ನು ಶರಾವತಿ ‌ನದಿಗೆ ಬಿಡಲಾಗಿದೆ. ಜಲಾಶಯದ ನೀರನ್ನು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಲಾಗುತ್ತದೆ.‌ ಸಾಗರ, ಸೊರಬ ತಾಲ್ಲೂಕುಗಳ ಗ್ರಾಮಗಳು, ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಳಕೆ ಮಾಡಲಾಗುವುದು. ಹಾಗೂ ಶಿರಸಿ, ಸಿದ್ದಾಪುರಗಳಿಗೂ ನೀರನ್ನು ಕೇಳಲಾಗುತ್ತಿದೆ. ಲಿಂಗನಮಕ್ಕಿ ‌ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್ಟ್ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು ವಿದ್ಯುತ್ ಅಭಾವವನ್ನು ನೀಗಿಸಿದೆ ಎಂದರು.

ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಜಲಾಶಯ ಆರಂಭ 1964ರಿಂದ ಇಲ್ಲಿಯವರೆಗೆ 21 ಬಾರಿ ನೀರನ್ನು‌ ನದಿಗೆ ಬಿಡಲಾಗಿದೆ. ಈ ನೀರನ್ನು ಜಿಲ್ಲೆಯ ಕುಡಿಯುವ ನೀರಿಗೆ ಹೊರತಾಗಿ ನೀರಾವರಿ ಸೇರಿದಂತೆ ಬೇರೆ ಯಾವ ಯೋಜನೆಗೂ ಬಳಸಿಕೊಳ್ಳಲಾಗುವುದಿಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular