ಟೊರೋಂಟೋ: ಕೆನಡಾದಲ್ಲಿರುವ ನಟ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಮೂರನೇ ಬಾರಿಗೆ ದಾಳಿ ನಡೆದಿದೆ. ಗುಂಡಿನ ದಾಳಿ ನಡೆದ ಘಟನೆ ವರದಿಯಾಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಕೆನಡಾದ ಟೊರೊಂಟೊ ಸರ್ರೆಯಲ್ಲಿರುವ ಕಪಿಲ್ ಶರ್ಮಾ ಅವರ ರೆಸ್ಟೋರೆಂಟ್ ಕ್ಯಾಪ್ಸ್ ಕೆಫೆ ಮೇಲೆ ಮೂರನೇ ಬಾರಿಗೆ ಗುಂಡಿನ ದಾಳಿ ನಡೆದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದೇ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾದ ಕೆಲವು ದಿನಗಳ ನಂತರ ಇತ್ತೀಚಿನ ದಾಳಿ ನಡೆದಿದೆ, ಕಪಿಲ್ ಶರ್ಮಾ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗಿನ ನಿಕಟತೆಯೇ ಇದಕ್ಕೆ ಕಾರಣ ಎಂದು ವರದಿಯಾಗಿದೆ.
ಈ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳನ್ನು ಒಳಗೊಂಡ ಹಲವಾರು ಉನ್ನತ ಮಟ್ಟದ ಬೆದರಿಕೆಗಳು ಮತ್ತು ಕ್ರಿಮಿನಲ್ ಪ್ರಕರಣಗಳೊಂದಿಗೆ ಈ ಗ್ಯಾಂಗ್ ಸಂಬಂಧ ಹೊಂದಿದೆ.
ಕೆನೆಡಾದಲ್ಲಿ ಅಧಿಕಾರಿಗಳು ಕೆಫೆಯನ್ನು ಪದೇ ಪದೇ ಗುರಿಯಾಗಿಸಿಕೊಂಡಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಇದು ಈಗ ಕಡಿಮೆ ಅವಧಿಯಲ್ಲಿ ಮೂರು ಬಾರಿ ಇಂತಹ ದಾಳಿಗಳನ್ನು ಎದುರಿಸಿದೆ.
Once again incident of Firing Happened at KAP'S CAFE. This is the third time firing took place at the Kapil Sharma cafe in Canada. pic.twitter.com/KoOYYBFNof
— Akashdeep Thind (@thind_akashdeep) October 16, 2025