HomeKarnataka2nd PUC Result : ಇಂದು ಸಂಜೆ 4 ಗಂಟೆಗೆ ದ್ವಿತೀಯ `PUC’ ಪೂರಕ ಪರೀಕ್ಷೆ-2...

2nd PUC Result : ಇಂದು ಸಂಜೆ 4 ಗಂಟೆಗೆ ದ್ವಿತೀಯ `PUC’ ಪೂರಕ ಪರೀಕ್ಷೆ-2 ರ ಫಲಿತಾಂಶ ಪ್ರಕಟ : ಈ ರೀತಿ `ರಿಸಲ್ಟ್’ ಚೆಕ್ ಮಾಡಿ

ಬೆಂಗಳೂರು :  ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು, ಆಗಸ್ಟ್/ಸೆಪ್ಟೆಂಬರ್ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರ ಫಲಿತಾಂಶವನ್ನು ಇಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಿದೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಮಂಡಲಿಯ ಜಾಲತಾಣಗಳಾದ https://karresults.nic.in ಅಥವಾ https://kseab.karnataka.gov.in/ಗೆ ಭೇಟಿ ನೀಡಿ ಫಲಿತಾಂಶವನ್ನು ಚೆಕ್ ಮಾಡಬಹುದಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರ ಫಲಿತಾಂಶದ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆ ಹೊರಡಿಸಿದ್ದು, ದಿನಾಂಕ 22\08\2023 ರಿಂದ 07\09\2023 ರವರೆಗೆ ಪರೀಕ್ಷೆ ನಡೆಸಲಾಗಿದೆ. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದು, ಫಲಿತಾಂಶವನ್ನು ದಿನಾಂಕ 12-09-2023 ರ ಇಂದು ಸಂಜೆ 4 ಗಂಟೆಗೆ ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular