ಬೆಂಗಳೂರು: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ ನಡೆದಿದೆ. ಗೌರಮ್ಮ(45) ಕೊಲೆಯಾದ ಮಹಿಳೆ ಎಂದು ಹೇಳಲಾಗಿದೆ.
ಗೌರಮ್ಮ ಅವರನ್ನು ಪತಿ ನಾಗರಾಜ್ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮೈಕೋ ಲೇಔಟ್ ಬಿಳೇಕಲ್ಲಹಳ್ಳಿಯ ಸಮೀಪ ಘಟನೆ ನಡೆದಿದೆ. ಜಗಳೂರು ಮೂಲದ ದಂಪತಿಯಾಗಿರುವ ನಾಗರಾಜ್ ಮತ್ತು ಗೌರಮ್ಮ ಕೆಲಸಕ್ಕಾಗಿ ಜಗಳೂರಿನಿಂದ ಬೆಂಗಳೂರಿಗೆ ಬಂದಿದ್ದರು.
ನಾಗರಾಜ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ದಂಪತಿಯ ಮೂವರು ಮಕ್ಕಳು ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಕುಡಿದು ಬಂದು ಪತ್ನಿ ಕೊಲೆ ಮಾಡಿ ಪತಿ ನಾಗರಾಜ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ನಾಗರಾಜ್ ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

