ಚಿಕ್ಕಮಗಳೂರಿನಲ್ಲಿ ಹೆತ್ತ ಮಗನಿಂದಲೇ ತಾಯಿಯ ಬರ್ಬರ ಹತ್ಯೆ ನಡೆದಿದೆ. ಅರ್ಧಂಬರ್ಧ ಸುಟ್ಟ ಶವದ ಪಕ್ಕದಲ್ಲಿ ಮಗ ಮಲಗಿದ್ದಾನೆ.
ಚಿಕ್ಕಮಗಳೂರು ತಾಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ. ತಾಯಿ ಭವಾನಿ(55) ಅವರನ್ನು ಪುತ್ರ ಪವನ್ ಕೊಲೆ ಮಾಡಿದ್ದಾನೆ. ನಿರ್ಜನ ಪ್ರದೇಶದ ಒಂಟಿ ಮನೆಯಲ್ಲಿ ಘಟನೆ ನಡೆದಿದೆ. ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಪವನ್ ನನ್ನು ಬಂಧಿಸಿದ್ದಾರೆ.
ಮಗ ಪವನ್ ತಾಯಿ ಹತ್ಯೆ ಮಾಡಿ ಮನೆ ಒಳಗೆ ತಾಯಿಯ ಶವ ಸುಟ್ಟು ಹಾಕಿದ್ದಾನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.