HomeLatest NewsBIG NEWS: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಮೊಬೈಲ್ ಬಳಕೆ ನಿಷೇಧ: ನಿಯಮ ಉಲ್ಲಂಘಿಸಿದರೆ ಡ್ರೈವರ್...

BIG NEWS: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಮೊಬೈಲ್ ಬಳಕೆ ನಿಷೇಧ: ನಿಯಮ ಉಲ್ಲಂಘಿಸಿದರೆ ಡ್ರೈವರ್ ಗಳ ಜೊತೆ ಕಂಡಕ್ಟರ್ ಗಳ ಮೇಲೂ ಕ್ರಮ

ಬೆಂಗಳೂರು: ಬಿಎಂಟಿಸಿ ಇವಿ ಬಸ್ ಚಾಲನೆ ವೇಳೆ ಚಾಲಕರು ಇನ್ಮುಂದೆ ಮೊಬೈಲ್ ಫೋನ್ ಗಳನ್ನು ಬಳಸುವಂತಿಲ್ಲ. ಚಾಲಕರು ಮೊಬೈಲ್ ಬಳಸದಂತೆ ಬಿಎಂಟಿಸಿ ಆದೇಶ ಹೊರಡಿಸ್ದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳ ಅಪಘಾತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪಘಾತಕ್ಕೆ ಚಾಲಕರು ಮೊಬೈಲ್ ಬಳಸುವುದೂ ಕೂಡ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಮೊಬೈಲ್, ಡಿಜಿಟಲ್ ಗ್ಯಾಜೆಟ್ಸ್, ಬ್ಲೂಟೂತ್, ಇಯರ್ ಫೋನ್ ಗಳನ್ನು ಬಳಸುವಂತಿಲ್ಲ.

ಸಂಗೀತ ಕೇಳುವುದು, ಆಡಿಯೋ ಸೌಂಡ್ ಗಳನ್ನು ಹಾಕುವುದು, ಚಾಅಟಿಂಗ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದು ಬಿಎಂಟಿಸಿ ಆದೇಶದಲ್ಲಿ ತಿಳಿಸಿದೆ. ನಿಯಮ ಉಲ್ಲಂಘಿಸಿದರೆ ಡ್ರೈವರ್ ಗಳು ಮಾತ್ರವಲ್ಲ ಕಂಡಕ್ಟರ್ ಗಳ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಿಎಂಟಿಸಿ ಭದ್ರತಾ ಹಾಗೂ ಜಾಗೃತ ನಿರ್ದೇಶಕರು ಎಲ್ಲಾ ಡಿಪೋ ಮ್ಯಾನೇಜರ್ ಗಳಿಗೂ ತಿಳುವಳಿಗೆ ನೀಡುವಂತೆ ಪತ್ರ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular