HomeKarnatakaBREAKING : ಬೆಂಗಳೂರಿನಲ್ಲಿ ಕಾರು, ಬೈಕ್ ಧ್ವಂಸ ಮಾಡಿದ್ದ ಪುಂಡರ ಗ್ಯಾಂಗ್ ಅರೆಸ್ಟ್

BREAKING : ಬೆಂಗಳೂರಿನಲ್ಲಿ ಕಾರು, ಬೈಕ್ ಧ್ವಂಸ ಮಾಡಿದ್ದ ಪುಂಡರ ಗ್ಯಾಂಗ್ ಅರೆಸ್ಟ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪುಡಿರೌಡಿಗಳ ಅಟ್ಟಹಾಸ ಮಿತಿಮೀರಿದ್ದು, ತಡರಾತ್ರಿ ಲಗ್ಗೆರೆ ಬಳಿ ಕಾರುಗಳ ಗ್ಲಾಸ್ ಒಡೆದು ಪುಂಡಾಟಿಕೆ ಮೆರೆದಿದ್ದ ಪುಂಡರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಲಗ್ಗೆರೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ 15 ಕಾರು, ಬೈಕ್ ಗಳನ್ನು  ಪುಡಿರೌಡಿಗಳು ಧ್ವಂಸ ಮಾಡಿದ್ದಾರೆ.  ದೊಣ್ಣೆ, ಲಾಂಗುಗಳಿಂದ ಕಾರುಗಳಿಗೆ ಹಾನಿ ಮಾಡಿದ್ದರು. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ  ಘಟನೆಗೆ ಸಂಬಂಧಿಸಿದಂತೆ ರಾಜಗೋಪಾಲನಗರ ಠಾಣೆ ಪೊಲೀಸರು ಅಟ್ಟಹಾಸ ಮೆರೆದ್ದಿದ್ದ ಪುಂಡರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. 6 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular