ಬಳ್ಳಾರಿ: ಬಳ್ಳಾರಿಯಲ್ಲಿ ಇಬ್ಬರು ಇಂಜಿನಿಯರ್ ಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನೀರು ಮತ್ತು ಒಳಚರಂಡಿ ಎಸ್ಟಿಮೇಟ್‌ಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ಗಳು ಬಲೆಗೆ ಬಿದ್ದಿದ್ದಾರೆ.
75,000 ರೂ. ಲಂಚಕ್ಕೆ ಇಂಜಿನಿಯರ್ ಗಳಾದ ಅಶೋಕ್ ಮತ್ತು ಕಾಶಿನಾಥ್ ಅವರು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 55,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಇಂಜಿನಿಯರ್ ಗಳಾಗಿದ್ದಾರೆ.
ಇಂಜಿನಿಯರ್ ಗಳಾದ ಅಶೋಕ್ ಮತ್ತು ಕಾಶಿನಾಥ್ ಅವರು ರಿಯಲ್ ಎಸ್ಟೇಟ್ ಉದ್ಯಮಿ ವೀರೇಶ್ ಅವರಿಂದ ಲಂಚ ಸ್ವೀಕರಿಸುತ್ತಿದ್ದರು.
2.47 ಎಕರೆಯ ಖಾಸಗಿ ಲೇಔಟ್ ಗೆ ಅನುಮತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನೀರು ಮತ್ತು ಒಳ ಚರಂಡಿಯ ಎಸ್ಟಿಮೇಟ್ ಗೆ ಅನುಮತಿ ನೀಡಲು ಲಂಚಕ್ಕೆ 55,000 ಲಂಚ ಪಡೆದು ಹಣ ಹಂಚಿಕೊಳ್ಳುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

