ಶಿವಮೊಗ್ಗ: ಖಾಸಗಿ ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಗಾತವಾಗಿದೆ. ಹೃದಯಾಘಾತವಾದರೂ ಚಾಲಕ ರಮೇಶ್ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಡುಬಾ ಗ್ರಾಮದ ಬಳಿ ಘಟನೆ ನಡೆದಿದೆ. ಹೃದಯಾಘಾತವಾದರೂ ಚಾಲಕ ರಮೇಶ್ ರಸ್ತೆ ಬದಿ ಬಸ್ ನಿಲ್ಲಿಸಿದ್ದಾರೆ. ಬಸ್ ನಲ್ಲಿ ತೆರಳುತ್ತಿದ್ದ 40 ಹೆಚ್ಚು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಅಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರಮೇಶ್ ಅವರನ್ನು ಕರೆದೊಯ್ಯದಲಾಗಿದೆ. ಕುರುವಳ್ಳಿ ಸಮಾಜ ಸೇವಕ ನಾಗರಾಜ್ ತುರ್ತು ನೆರವು ನೀಡಿದ್ದಾರೆ. ಚಾಲಕನ ಚಿಕಿತ್ಸೆ ವೆಚ್ಚ ಸೇರಿ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

