
ಚಿಕ್ಕಮಗಳೂರು ಜಿಲ್ಲೆ ಕಳಸ ವಿಭಾಗದ DRFO ದರ್ಶನ್ ಹುಲಿ ಉಗುರಿನ ಡಾಲರ್ ಹಾಕಿರುವ ಫೋಟೋ ವೈರಲ್ ಆಗಿದ್ದು, ಜನರಿಗೊಂದು ಕಾನೂನು..? ಅಧಿಕಾರಿಗಳಿಗೆ ಒಂದು ಕಾನೂನಾ..? ಎಂಬ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ DRFO ದರ್ಶನ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
DRFO ಎಂ.ದರ್ಶನ್ ವಿರುದ್ಧ ಅಲ್ದೂರು ಅರಣ್ಯ ಇಲಾಖೆ ಕಚೇರಿಗೆ ದೂರು ನೀಡಲಾಗಿದ್ದು, ಸಾಮಾಜಿಕ ಕಾರ್ಯಕರ್ತರಾದ ಸುಪ್ರೀತ್, ಅಬ್ದುಲ್ ಖಾದರ್ ಎಂಬುವವರು ದೂರು ನೀಡಿದ್ದರು. ಹುಲಿ ಉಗುರಿನ ಡಾಲರ್ ಹಾಕಿದ DRFO ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
ಸಾಂದರ್ಭಿಕ ಚಿತ್ರ

