HomeKarnatakaBREAKING : ರಾಜ್ಯದಲ್ಲಿ ನಿಲ್ಲದ ಪುಂಡರ 'ಬೈಕ್ ವ್ಹೀಲಿಂಗ್' ಹುಚ್ಚಾಟ ; ಕೋಲಾರದಲ್ಲಿ ಅರ್ಚಕ ಬಲಿ.!

BREAKING : ರಾಜ್ಯದಲ್ಲಿ ನಿಲ್ಲದ ಪುಂಡರ ‘ಬೈಕ್ ವ್ಹೀಲಿಂಗ್’ ಹುಚ್ಚಾಟ ; ಕೋಲಾರದಲ್ಲಿ ಅರ್ಚಕ ಬಲಿ.!

ಬೆಂಗಳೂರು : ಪೊಲೀಸರು ಅದೆಷ್ಟೇ ವಾರ್ನ್ ಮಾಡಿ ದಂಡ ವಿಧಿಸಿದ್ರೂ ಕೂಡ ರಾಜ್ಯದಲ್ಲಿ ಬೈಕ್ ವ್ಹೀಲಿಂಗ್ ಹುಚ್ಚಾಟ ನಿಲ್ಲುತ್ತಿಲ್ಲ.

ಬೈಕ್ ಡಿಕ್ಕಿಯಾಗಿ ಅರ್ಚಕ ಮೃತಪಟ್ಟಂತಹ ಘಟನೆ ಕೋಲಾರದ ಬಂಗಾರಪೇಟೆಯ ಸಂತೆಗೇಟ್ ಬಳಿ ನಡೆದಿದೆ.
ಬಂಗಾರಪೇಟೆಯ ಸಂತೆಗೇಟ್ ಬಳಿ ಪುಂಡರು ವ್ಹೀಲಿಂಗ್ ಮಾಡುತ್ತಿದ್ದರು. ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ಅರ್ಚಕರೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅರ್ಚಕ ಗೋಪಾಲ್ ರಾವ್ (45) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular