ಬೆಂಗಳೂರು : ಬೆಂಗಳೂರಿನಲ್ಲಿ ವಿಂಗ್ ಕಮಾಂಡರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ವಿಕಾಸ್ ಕುಮಾರ್‘ ನನ್ನು ಬಿಡುಗಡೆ ಮಾಡಲಾಗಿದೆ.
ಪ್ರಕರಣ ಸಂಬಂಧ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ವಿಕಾಸ್ ನನ್ನು ಬಂಧಿಸಿದ್ದರು. ನಂತರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮೊದಲು ಬೈಕ್ ಸವಾರ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದು ವಿಂಗ್ ಕಮಾಂಡರ್ ಎಂಬುದು ಸಿಸಿಟಿವಿಯಲ್ಲಿ ದೃಶ್ಯಾವಳಿಯಿಂದ ಬಯಲಾಗಿತ್ತು.
ಬೆಂಗಳೂರು ರೋಡ್ ರೇಜ್ ಕೇಸ್’ಗೆ ಬಿಗ್ ಟ್ವಿಸ್ಟ್
ಬೆಂಗಳೂರು ರೋಡ್ ರೇಜ್ ಕೇಸ್’ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದ್ದು, ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿದ ವಿಂಗ್ ಕಮಾಂಡರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಬೈಕ್ ಸವಾರ ವಿಕಾಸ್ ಪ್ರತಿ ದೂರಿನ ಮೇರೆಗೆ ವಿಂಗ್ ಕಮಾಂಡರ್ ಆದಿತ್ಯ ಬೋಸ್ ವಿರುದ್ಧ ಬೈಯಪ್ಪನಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಭಾರತೀಯ ವಾಯುಪಡೆಯ ಅಧಿಕಾರಿ ಮತ್ತು ಅವರ ಪತ್ನಿ ಭಾಗಿಯಾಗಿರುವ ಬೆಂಗಳೂರು ರೋಡ್ ರೇಜ್ ಪ್ರಕರಣದಲ್ಲಿ ಹೊಸ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅಧಿಕಾರಿ ಮತ್ತು ಹಲ್ಲೆಕೋರರ ನಡುವಿನ ಘರ್ಷಣೆಯನ್ನು ಬಹಿರಂಗಪಡಿಸಿದೆ. ಮೊದಲು ವಿಂಗ್ ಕಮಾಂಡರ್ ಆದಿತ್ಯ ಬೋಸ್ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿ ಕೆಳಗೆ ಬೀಳಿಸುವ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ತನ್ನ ಕೈಯಿಂದ ಸವಾರನ ಕುತ್ತಿಗೆಯನ್ನು ಲಾಕ್ ಮಾಡಿ ನೆಲಕ್ಕೆ ಬೀಳಿಸಿದ್ದಾರೆ.

