ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಮತ್ತೊಂದು ಶಾಕ್ ತಟ್ಟಿದೆ. ವಿದ್ಯುತ್ ದರ ಏರಿಕೆ ಮಾಡಿ ಕೆ.ಇ.ಆರ್.ಸಿ. ಶಾಕ್ ನೀಡಿದೆ.
ವಿದ್ಯುತ್ ದರ ಏರಿಕೆ ಮಾಡಿ ಕೆ.ಇ.ಆರ್.ಸಿ. ಆದೇಶ ಹೊರಡಿಸಿದೆ. ಒಂದು ಯೂನಿಟ್ ಗೆ 56 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ದರ ಏರಿಕೆಗೆ ಎಸ್ಕಾಂಗಳಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೇ ತಿಂಗಳಿನಿಂದ ನೂತನ ದರ ಅನ್ವಯವಾಗಲಿದೆ.
ಗೃಹ ಬಳಕೆದಾರರು, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ದರ ಏರಿಕೆ ಅನ್ವಯವಾಗಲಿದೆ. ಮೇ 1ರಿಂದ ಪರಷ್ಕೃತ ದರ ಏರಿಕೆ ಆದೇಶ ಜಾರಿಯಾಗಲಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 56 ಪೈಸೆ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿದೆ. ಎಸ್ಕಾಂ ಗಳ ಆದಾಯ ಕೊರತೆ ಸರಿದೂಗಿಸಲು ಈ ಶುಲ್ಕ ವಿಧಿಸಲಾಗಿದೆ. ಮೇ 1ರಿಂದ ಗ್ರಾಹಕರ ಬಿಲ್ ನಲ್ಲಿ ಇದು ನಮೂದಾಗಲಿದೆ ಎಂದು ಹೇಳಲಾಗಿದೆ.

