HomeLatest NewsBREAKING: ಬೆಂಗಳೂರಲ್ಲಿ ಮದ್ಯದ ಮತ್ತಿನಲ್ಲಿ ಕಾರ್ ಚಾಲಕನಿಂದ ಅಪಘಾತ: ಕಾಂಪಾಂಡ್ ಗೆ ಗುದ್ದಿದ ಕಾರ್: 2...

BREAKING: ಬೆಂಗಳೂರಲ್ಲಿ ಮದ್ಯದ ಮತ್ತಿನಲ್ಲಿ ಕಾರ್ ಚಾಲಕನಿಂದ ಅಪಘಾತ: ಕಾಂಪಾಂಡ್ ಗೆ ಗುದ್ದಿದ ಕಾರ್: 2 ಬೈಕ್ ಸೇರಿ 3 ವಾಹನಗಳಿಗೆ ಹಾನಿ

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ ಕಾಂಪೌಂಡ್ ಗೆ ಗುದ್ದಿದೆ. ಕಾರ್ ಜಖಂಗೊಂಡಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ಬಸವನಗುಡಿಯ ವಾಸವಿ ಶಾಲೆಯ ಬಳಿ ಘಟನೆ ನಡೆದಿದೆ. ಬೈಕ್ ಗೆ ಡಿಕ್ಕಿ ತಪ್ಪಿಸಲು ಹೋಗಿ ಕಾಂಪೌಂಡ್ ಗೆ ಕಾರ್ ಡಿಕ್ಕಿಯಾಗಿದೆ. ಛತ್ತೀಸ್ ಗಢ ನೋಂದಣಿಯ ಬೆಂಜ್ ಕಾರ್  ಅಪಘಾತಕ್ಕೀಡಾಗಿದೆ.

ಮದ್ಯ ಸೇವಿಸಿ ಪ್ರಣಯ್ ಜೈನ್ ಕಾರ್ ಚಲಾಯಿಸಿದ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ನೇತಾಜಿ ನಗರ ನಿವಾಸಿ ಪ್ರಣಯ್ ಜೈನ್ ಅಪಘಾತವೆಸಗಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಎರಡು ಬೈಕ್, ಒಂದು ಕಾರ್ ಗೂ ಹಾನಿಯಾಗಿದೆ. ಬಸವನಗುಡಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular