HomeKarnatakaBREAKING : ಬೆಂಗಳೂರಿನಲ್ಲಿ 'ಸೀರಿಯಲ್ ನಟಿ' ಮೋಹಕ್ಕೆ ಯುವಕ ಬಲಿ, ನೇಣು ಬಿಗಿದುಕೊಂಡು ಆತ್ಮಹತ್ಯೆ..!

BREAKING : ಬೆಂಗಳೂರಿನಲ್ಲಿ ‘ಸೀರಿಯಲ್ ನಟಿ’ ಮೋಹಕ್ಕೆ ಯುವಕ ಬಲಿ, ನೇಣು ಬಿಗಿದುಕೊಂಡು ಆತ್ಮಹತ್ಯೆ..!

ಬೆಂಗಳೂರು : ಬೆಂಗಳೂರಿನಲ್ಲಿ  ಸೀರಿಯಲ್ ನಟಿಯ ವ್ಯಾಮೋಹಕ್ಕೆ ಯುವಕ ಬಲಿಯಾದ ಘಟನೆ ನಡೆದಿದೆ.

ಸೀರಿಯಲ್ ನಟಿ ಮದುವೆಯಾಗಲು ಒಪ್ಪದಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮದನ್ ಎಂದು ಗುರುತಿಸಲಾಗಿದೆ.

ಸೀರಿಯಲ್ ನಟಿ ವೀಣಾರನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಆಕೆ ಜೊತೆ ಪಾರ್ಟಿ ಕೂಡ ಮಾಡಿದ್ದನು ಎಂದು ಹೇಳಲಾಗಿದೆ. ನಟಿ ಮದುವೆಗೆ ಒಪ್ಪದ ಹಿನ್ನೆಲೆ ಮದನ್ (25)  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.ಪಾರ್ಟಿಯಲ್ಲಿ ಮದನ್ ಮದುವೆ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ, ಆದರೆ ಇದಕ್ಕೆ ವೀಣಾ ನೋ ಎಂದಿದ್ದಾಳೆ. ಇದರಿಂದ ಮನನೊಂದು ಮದನ್ಆ ತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಟಿ ವೀಣಾ ವಿರುದ್ಧ ಪೊಲೀಸರು ಅಟ್ರಾಸಿಟಿ ಪ್ರಕರಣ ದಾಖಲಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular