HomeInternationalBREAKING : ಇಂಡೋನೇಷ್ಯಾದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ

BREAKING : ಇಂಡೋನೇಷ್ಯಾದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ

ಇಂಡೋನೇಷ್ಯಾದ ಬಾಂದಾ ಸಮುದ್ರದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.9ರಷ್ಟಿತ್ತು ಎಂದು ಯುಎಸ್ಜಿಎಸ್ ತಿಳಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಇಂಡೋನೇಷ್ಯಾದ ಸಮಯದ ಪ್ರಕಾರ, ಬೆಳಿಗ್ಗೆ 10.23 ಕ್ಕೆ ದೇಶದ  ಬಾಂಡಾ ಸಮುದ್ರದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ಸಮುದ್ರದಲ್ಲಿ ಸಂಭವಿಸಿದ ಈ ಭೂಕಂಪವು ಸೌಮಲಕಿ ನಗರವನ್ನು ನಡುಗಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುದ್ದಿ ಸಂಸ್ಥೆ  ಎಎಫ್ಪಿ ಪ್ರಕಾರ, ಭೂಕಂಪದಿಂದ ಇಲ್ಲಿಯವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪನವು ತೀವ್ರವಾಗಿದೆ ಎಂದು ಸೌಮಲಕಿ ನಗರದ ನಿವಾಸಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.

For Latest News Updates, Join Our Whatsapp Community🚩
RELATED ARTICLES

Most Popular