HomeKarnatakaBREAKING : ಉಡುಪಿಯಲ್ಲಿ 'ಪೆಟ್ರೋಲ್ ಬಂಕ್' ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಗೆ ಬೆಂಕಿ ;...

BREAKING : ಉಡುಪಿಯಲ್ಲಿ ‘ಪೆಟ್ರೋಲ್ ಬಂಕ್’ ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಗೆ ಬೆಂಕಿ ; ತಪ್ಪಿದ ಭಾರಿ ದುರಂತ

ಉಡುಪಿ: ಉಡುಪಿ ಸಮೀಪದ ಮಣಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೆಂದೂರು ಕಟ್ಟೆ ಎಂಬಲ್ಲಿ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್‌ಗೆ ಬೆಳಗಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ.

ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಪೆಟ್ರೋಲ್ ಪಂಪ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಬಸ್‌ನ ಸಮೀಪದಲ್ಲೇ ಇನ್ನೆರಡು ಬಸ್‌ಗಳು ಹಾಗೂ ಟೆಂಪೋ ಕೂಡ ನಿಲ್ಲಿಸಲಾಗಿತ್ತು.

ಅಲ್ಲದೆ, ಬಸ್‌ಗಳ ಪಕ್ಕದಲ್ಲೇ ಪೆಟ್ರೋಲ್ ಪಂಪ್ ಇದ್ದ ಕಾರಣ ಬೆಂಕಿ ಇತರ ವಾಹನಗಳಿಗೆ ಅಥವಾ ಪೆಟ್ರೋಲ್ ಪಂಪ್‌ಗೆ ವ್ಯಾಪಿಸಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಲ್ಲಿ ಬಸ್‌ಗೆ ಭಾರೀ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಪೆಟ್ರೋಲ್ ಪಂಪ್ ಮಾಲೀಕರು ಹಾಗೂ ಬೆಂಕಿಗಾಹುತಿಯಾದ ಬಸ್‌ನ ಮಾಲೀಕರು ಒಬ್ಬರೇ ಎಂದು ವರದಿಯಾಗಿದೆ.  ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬೆಂಕಿಗಾಹುತಿಯಾದ ಬಸ್‌ಗೆ ₹1.7 ಲಕ್ಷಕ್ಕೂ ಅಧಿಕ ಟ್ರಾಫಿಕ್ ದಂಡ ಬಾಕಿ; 9 ಮಂದಿ ಸಾವು

ಗ್ರೇಟರ್ ನೋಯ್ಡಾ: ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿಗಾಹುತಿಯಾಗಿ 9 ಪ್ರಯಾಣಿಕರು ಮೃತಪಟ್ಟಿದ್ದ ಬಸ್‌ಗೆ 60ಕ್ಕೂ ಅಧಿಕ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಇರುವುದು ಬೆಳಕಿಗೆ ಬಂದಿದೆ. ಈ ಪೈಕಿ 20ಕ್ಕೂ ಹೆಚ್ಚು ದಂಡಗಳು ಇನ್ನೂ ಪಾವತಿಯಾಗಿಲ್ಲ. ವಾಹನದ ಮಾಹಿತಿಗೆ ಸಂಬಂಧಿಸಿದ ದಾಖಲೆಗಳ ಪ್ರಕಾರ, ಬಸ್‌ನ ಬಾಕಿ ಇರುವ ದಂಡದ ಮೊತ್ತ ₹1.7 ಲಕ್ಷಕ್ಕೂ ಅಧಿಕವಾಗಿದೆ.

BR32PA8647 ನೋಂದಣಿ ಸಂಖ್ಯೆಯ ಈ ಬಸ್ ದೆಹಲಿಯ ಕಾಶ್ಮೀರಿ ಗೇಟ್‌ನಿಂದ ಹೊರಟು, ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿರುವ ಹೊಸ ವಿಮಾನ ನಿಲ್ದಾಣದ ಸಮೀಪ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತ್ತು.

ಬಸ್‌ಗೆ ಕೊನೆಯದಾಗಿ ಆಗಸ್ಟ್ 19ರಂದು ದೆಹಲಿಯ ಮಯೂರ್ ವಿಹಾರ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿತ್ತು. “ಸ್ಟೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನದ ಮೇಲ್ಭಾಗದಲ್ಲಿ ಸರಕು ಸಾಗಣೆ” ಆರೋಪಕ್ಕೆ ₹18,500 ದಂಡ ವಿಧಿಸಲಾಗಿತ್ತು. ಬಸ್ ವಿರುದ್ಧ ದಾಖಲಾಗಿರುವ ದಂಡಗಳ ಪೈಕಿ ಇದೇ ರೀತಿಯ ಉಲ್ಲಂಘನೆ ಹಲವು ಬಾರಿ ಕಂಡುಬಂದಿದೆ.

ಚಾಲಕ, ನಿರ್ವಾಹಕ ಬಂಧನ

ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರು ನೀಡಿದ ಮಾಹಿತಿಯ ಪ್ರಕಾರ, ಚಾಲಕನ ಕ್ಯಾಬಿನ್‌ನಿಂದ ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಚಾಲಕ ಹಾಗೂ ನಿರ್ವಾಹಕನಿಗೆ ಎಚ್ಚರಿಕೆ ನೀಡಲಾಗಿತ್ತು.

ಆದರೆ ಚಾಲಕ ತಕ್ಷಣ ಬಸ್ ನಿಲ್ಲಿಸದೆ, ಕ್ಯಾಬಿನ್‌ನಲ್ಲೇ ಸಿಗರೇಟ್ ಸೇದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಚಾಲಕನ ಸೀಟ್‌ನ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಅದು ವೇಗವಾಗಿ ಇಡೀ ಬಸ್‌ಗೆ ವ್ಯಾಪಿಸಿದೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಬಸ್‌ನೊಳಗೆ 9 ಮೃತದೇಹಗಳು ಪತ್ತೆಯಾಗಿವೆ.

ಘಟನೆಯ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ಘೋಷಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular