HomeKarnatakaBREAKING: ಲೋಕಸಭೆ ಚುನಾವಣೆಯಲ್ಲಿ `ಬಿಜೆಪಿ-ಜೆಡಿಎಸ್ ಮೈತ್ರಿ’ ಬಗ್ಗೆ ಮಾಜಿ ಪ್ರಧಾನಿ 'HDD' ಮಹತ್ವದ ಹೇಳಿಕೆ

BREAKING: ಲೋಕಸಭೆ ಚುನಾವಣೆಯಲ್ಲಿ `ಬಿಜೆಪಿ-ಜೆಡಿಎಸ್ ಮೈತ್ರಿ’ ಬಗ್ಗೆ ಮಾಜಿ ಪ್ರಧಾನಿ ‘HDD’ ಮಹತ್ವದ ಹೇಳಿಕೆ

ಬೆಂಗಳೂರು : ಲೋಕಸಭೆ ಚುನಾವಣೆ (Lokasabha Electioon) ಗೆ ಬಿಜೆಪಿ-ಜೆಡಿಎಸ್ ಮೈತ್ರಿ (BJP-JD(S) alliance) ವಿಚಾರದ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು(H.D. Deve Gowda) ಪ್ರತಿಕ್ರಿಯೆ ನೀಡಿದ್ದು, ಲೋಕಸಭೆ ಚುನಾವಣೆಗೆ ಸ್ವಂತ ಬಲದಲ್ಲಿ ಜೆಡಿಎಸ್ (JDS) ಪಕ್ಷ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ.ಡಿ, ಲೋಕಸಭೆ ಚುನಾವಣೆಗೆ ನಾವು ಸ್ವಂತ ಬಲದಲ್ಲಿ ಹೋರಾಟ ಮಾಡುತ್ತೇವೆ. ಸ್ವಂತ ಬಲದಿಂದ ಹೋರಾಟ ಮಾಡುವ ಶಕ್ತಿ ನಮಗಿದೆ. ಸದ್ಯದಲ್ಲೇ ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಚುನಾವಣೆ ನಡೆಯಲಿವೆ. ಆ ಚುನಾವಣೆಗಳಿಗೂ ನಾವು ತಯಾರಿ ಮಾಡಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಡಿಎಸ್ ಪಕ್ಷ ಉಳಿಯಬೇಕಾದ್ರೆ ಏನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ಪಕ್ಷ ಸಂಘಟನೆ ಬಗ್ಗೆ ಮುಖಂಡರ ಜೊತೆಗೆ ಮಾತುಕತೆ ನಡೆಸುತ್ತೇವೆ. ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಸಾಕಷ್ಟು ಚರ್ಚೆ ಮಾಡಲಾಗುತ್ತದೆ. ಲೋಕಸಭೆ ಚುನಾವಣೆಗೆ ಎಷ್ಟು ಕಡೆ ಅಭ್ಯರ್ಥಿಗಳನ್ನು ಹಾಕಬೇಕು. ಎಲ್ಲೆಲ್ಲಿ ಸ್ಪರ್ಧಿಸಬೇಕೆಂದು ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular