HomeLatest NewsBREAKING : ರಾಜ್ಯದಲ್ಲಿ ನಿಲ್ಲದ 'ಹಾರ್ಟ್ ಅಟ್ಯಾಕ್' :  ಜಾತ್ರೆ ಬಂದೋಬಸ್ತ್ ಗೆ ಬೆಳಗಾವಿಗೆ ಬಂದಿದ್ದ...

BREAKING : ರಾಜ್ಯದಲ್ಲಿ ನಿಲ್ಲದ ‘ಹಾರ್ಟ್ ಅಟ್ಯಾಕ್’ :  ಜಾತ್ರೆ ಬಂದೋಬಸ್ತ್ ಗೆ ಬೆಳಗಾವಿಗೆ ಬಂದಿದ್ದ ‘ASI’ ಹೃದಯಾಘಾತದಿಂದ ಸಾವು

ಬೆಳಗಾವಿ : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎಎಸ್ ಐ ಹೃದಯಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ASI ‘ಎಲ್ ಜೆ ಮೀರಾನಾಯಕ್’ (56) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಗೋಕಾಕ್ ನ ಲಕ್ಷ್ಮೀದೇವಿ ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಎಲ್ ಜೆ ಮೀರಾನಾಯಕ್ ಬಾಲಕರ ವಸತಿ ನಿಲಯದಲ್ಲಿ ತಂಗಿದ್ದರು. ಆದರೆ ಧಿಡೀರ್ ಹೃದಯಾಘಾತದಿಂದ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular