HomeKarnatakaBreaking : ಮಹತ್ವದ ಸಚಿವ ಸಂಪುಟ ಸಭೆ ಅಂತ್ಯ; ಷರತ್ತು ವಿಧಿಸಿ ಗ್ಯಾರಂಟಿ ಜಾರಿಗೆ ಸಚಿವರ...

Breaking : ಮಹತ್ವದ ಸಚಿವ ಸಂಪುಟ ಸಭೆ ಅಂತ್ಯ; ಷರತ್ತು ವಿಧಿಸಿ ಗ್ಯಾರಂಟಿ ಜಾರಿಗೆ ಸಚಿವರ ಒಲವು

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಮುಗಿದಿದ್ದು, ಷರತ್ತು ವಿಧಿಸಿ ಗ್ಯಾರಂಟಿ ಜಾರಿಗೆ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಸಭೆಯಲ್ಲಿ ಸಚಿವರ ಮಾಹಿತಿ ಸಂಗ್ರಹಿಸಲಾಗಿದ್ದು, ಷರತ್ತು ವಿಧಿಸಿ ಗ್ಯಾರಂಟಿ ಜಾರಿಗೆ ಬಹುತೇಕ ಸಚಿವರು ಒಲವು ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ಯಾರಂಟಿ ಯೋಜನೆಗಳ ಜಾರಿಗೆ ಮಾನದಂಡ ಇಲ್ಲದಿದ್ದರೆ ಆರ್ಥಿಕ ಹೊರೆ ಮೀತಿ ಮೀರಲಿದೆ. ಯಾಥಾವತ್ ಜಾರಿಗೆ 1 ಲಕ್ಷ ಕೋಟಿ ರೂ. ಅನುದಾನ ಬೇಕಾಗಬಹುದು. ಮಾನದಂಡ ಇಲ್ಲದಿದ್ದರೆ ಯೋಜನೆ ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ ಗ್ಯಾರಂಟಿ ಜಾರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿ, ಮಾರ್ಗಸೂಚಿ ಪಾಲನೆ ವೇಳೆ ಅಗತ್ಯ ಸಿದ್ಧತೆಗೆ ಕಾಲವಕಾಶ ಸಿಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular