HomeKarnatakaBREAKING: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ಬ್ಯಾರಿಕೇಡ್ ಹಾರಿ ಕೈಯಲ್ಲಿ ಹಾರ...

BREAKING: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ; ಬ್ಯಾರಿಕೇಡ್ ಹಾರಿ ಕೈಯಲ್ಲಿ ಹಾರ ಹಿಡಿದು ಪ್ರಧಾನಿ ಕಾರಿನತ್ತ ನುಗ್ಗಿದ ಯುವಕ

ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದು, ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ರೋಡ್ ಶೋ ವೇಳೆ ಭದ್ರತಾ ವೈಫಲ್ಯವುಂಟಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಏರ್ ಪೋರ್ಟ್ ನಿಂದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮೂಲಕವಾಗಿ ರೈಲ್ವೆ ಮೈದಾನಕ್ಕೆ ಸಾಗಿದ್ದು, ಸುಮಾರು 8 ಕಿ.ಮೀ ವರೆಗೆ ರೂಡ್ ಶೋನಲ್ಲಿ ಭಾಗಿಯಾಗಿದ್ದಾರೆ. ರೋಡ್ ಶೋ ವೇಳೆ ಭದ್ರತಾ ಲೋಪವಾಗಿದ್ದು, ಯುವಕನೊಬ್ಬ ಬ್ಯಾರಿಕೇಡ್ ಗಳನ್ನು ಹಾರಿ, ಕೈಯಲ್ಲಿ ಹಾರ ಹಿಡಿದು ಪ್ರಧಾನಿ ಮೋದಿಯತ್ತ ಧಾವಿಸಿ ಬಂದಿದ್ದಾನೆ.

ಪ್ರಧಾನಿ ಮೋದಿಯವರಿಗೆ ಖುದ್ದು ಹಾರ ಹಾಕುವ ನಿಟ್ಟಿನಲ್ಲಿ ಯತ್ನಿಸಿದ್ದಾನೆ. ಕ್ಷಣಾರ್ಧದಲ್ಲಿ ಭದ್ರತಾ ಸಿಬ್ಬಂದಿಗಳು ಯುವಕನನ್ನು ತಡೆದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular