ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ವಜೀರಿಸ್ತಾನ್ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ನುಗ್ಗಿಸಿದ ಪರಿಣಾಮ 13 ಸೈನಿಕರು ಸಾವನ್ನಪ್ಪಿ, 10 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಕ ತುಂಬಿದ ವಾಹನವನ್ನು ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಡಿಕ್ಕಿ ಹೊಡೆದನು. ಈ ಸ್ಫೋಟದಲ್ಲಿ 13 ಸೈನಿಕರು ಸಾವನ್ನಪ್ಪಿದರು, 10 ಸೇನಾ ಸಿಬ್ಬಂದಿ ಮತ್ತು 19 ನಾಗರಿಕರು ಗಾಯಗೊಂಡರು” ಎಂದು ಅಧಿಕಾರಿ ವರದಿಗಾರರಿಗೆ ತಿಳಿಸಿದರು. ಸ್ಫೋಟವು ಹತ್ತಿರದ ಮನೆಗಳಿಗೂ ಹಾನಿಯನ್ನುಂಟುಮಾಡಿತು.
“ಸ್ಫೋಟದ ಪರಿಣಾಮವಾಗಿ ಎರಡು ಮನೆಗಳ ಛಾವಣಿಗಳು ಕುಸಿದು ಬಿದ್ದವು, ಆರು ಮಕ್ಕಳು ಗಾಯಗೊಂಡರು” ಎಂದು ಖೈಬರ್ ಪಖ್ತುನ್ಖ್ವಾದಲ್ಲಿ ನಿಯೋಜಿತ ಪೊಲೀಸ್ ಅಧಿಕಾರಿಯೊಬ್ಬರು ಗೆ ತಿಳಿಸಿದರು. ಯಾವುದೇ ಗುಂಪು ಇನ್ನೂ ಹೊಣೆಗಾರಿಕೆಯನ್ನು ಹೊತ್ತುಕೊಂಡಿಲ್ಲ.
You Might Also Like
TAGGED:ಪಾಕಿಸ್ತಾನ