HomeLatest Newsಸೋಫಿಯಾ ಅನ್ಸಾರಿ: ಬಿಕಿನಿ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಯಲ್ಲೂ ಮಾಡಿದ್ದಾರೆ ಮೋಡಿ !

ಸೋಫಿಯಾ ಅನ್ಸಾರಿ: ಬಿಕಿನಿ ಮಾತ್ರವಲ್ಲ, ಸಾಂಪ್ರದಾಯಿಕ ಉಡುಗೆಯಲ್ಲೂ ಮಾಡಿದ್ದಾರೆ ಮೋಡಿ !

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೋಫಿಯಾ ಅನ್ಸಾರಿ ಎಂದರೆ ನೆಟ್ಟಿಗರಿಗೆ ಮೊದಲು ನೆನಪಾಗುವುದು ಅವರ ಗ್ಲಾಮರಸ್ ಹಾಗೂ ಬೋಲ್ಡ್ ಅವತಾರ. ಹೆಚ್ಚಾಗಿ ಬಿಕಿನಿ ಅಥವಾ ಮಿನಿಮಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುವ ಸೋಫಿಯಾ, ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಇತ್ತೀಚೆಗೆ ಸೋಫಿಯಾ ಹಂಚಿಕೊಂಡ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಬಿಳಿ ಬಿಕಿನಿ ಧರಿಸಿ ಅದರ ಮೇಲೆ ಗುಲಾಬಿ ಬಣ್ಣದ ಚಿಕನ್‌ಕಾರಿ ಕುರ್ತಾ ತೊಟ್ಟಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ತಕ್ಕಂತೆ ಭಾರೀ ಗಾತ್ರದ ಝುಮುಕಿಗಳನ್ನು ಧರಿಸಿ ಕ್ಯಾಮೆರಾ ಮುಂದೆ ಸಿದ್ಧವಾಗುತ್ತಾ ಕಣ್ಮನ ಸೆಳೆದಿದ್ದಾರೆ. ಈ ಅವತಾರದಲ್ಲಿ ಅವರು ಅತ್ಯಂತ ಮುಗ್ಧ ಮತ್ತು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೋಫಿಯಾ ಅನ್ಸಾರಿ ಅವರನ್ನು ಹೆಚ್ಚಾಗಿ ಬಿಕಿನಿ ಲುಕ್‌ನಲ್ಲಿ ನೋಡುತ್ತಿದ್ದ ಅಭಿಮಾನಿಗಳು, ಅವರ ಈ ಸಾಂಪ್ರದಾಯಿಕ ಶೈಲಿಯನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ. ಇದುವರೆಗೂ ಗ್ಲಾಮರಸ್ ಅಂದಕ್ಕೆ ಹೆಸರಾಗಿದ್ದ ಸೋಫಿಯಾ, ಸಾಂಪ್ರದಾಯಿಕ ಉಡುಗೆಯಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತಾರೆ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ. ಅವರ ಈ ಹೊಸ ಲುಕ್‌ಗೆ ಅಭಿಮಾನಿಗಳು ಮನಸೋತಿದ್ದು, ವಿಡಿಯೋವನ್ನು ಪದೇ ಪದೇ ನೋಡುತ್ತಿದ್ದಾರೆ. ಸೋಫಿಯಾ ಅವರ ಈ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ ಎಂಬುದಕ್ಕೆ ವಿಡಿಯೋ ಸಾಕ್ಷಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular