HomeLatest NewsBREAKING : ಕರ್ನಾಟಕದಲ್ಲಿ ನಟ ‘ಕಮಲ್ ಹಾಸನ್ ‘ಚಿತ್ರಗಳ ಬಹಿಷ್ಕಾರ : ವಾಟಾಳ್ ನಾಗರಾಜ್ ಎಚ್ಚರಿಕೆ

BREAKING : ಕರ್ನಾಟಕದಲ್ಲಿ ನಟ ‘ಕಮಲ್ ಹಾಸನ್ ‘ಚಿತ್ರಗಳ ಬಹಿಷ್ಕಾರ : ವಾಟಾಳ್ ನಾಗರಾಜ್ ಎಚ್ಚರಿಕೆ

ಬೆಂಗಳೂರು : ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕೆರಳಿ ಕೆಂಡವಾಗಿದ್ದಾರೆ. ಕರ್ನಾಟಕದಲ್ಲಿ ನಟ ‘ಕಮಲ್ ಹಾಸನ್ ‘ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ ‘ಕಮಲ್ ಹಾಸನ್ ಈ ಕೂಡಲೇ ಕ್ಷಮೆಯಾಚಿಸಬೇಕು, ಅವರ ಹೇಳಿಕೆ ಖಂಡನೀಯ. ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬರೀ ಕ್ಷಮಾಪಣೆ ಕೇಳಿದ್ರೆ ಸಾಲಲ್ಲ, ರಾಜ್ಯಕ್ಕೆ ಪ್ರವೇಶಿಸದಂತೆ ಬಹಿಷ್ಕಾರ ಹಾಕಬೇಕು. ಕರ್ನಾಟಕದಲ್ಲಿ ನಟ ‘ಕಮಲ್ ಹಾಸನ್ ‘ಚಿತ್ರಗಳನ್ನು ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಭಾಷೆ ಹುಟ್ಟಿದ್ದೇ ತಮಿಳಿನಿಂದ ಎಂದು ನಟ ಕಮಲ್ ಹಾಸನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಜೂನ್ 5 ರಂದು ರಿಲೀಸ್ ಆಗುತ್ತಿರುವ ತಮ್ಮ ಥಗ್ ಲೈಪ್ ಚಿತ್ರದ ಪ್ರಚಾರದ ವೇಳೆ ಈ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿಮ್ಮ ಭಾಷೆ (ಕನ್ನಡ) ತಮಿಳಿನಿಂದ ಹುಟ್ಟಿದೆ. ಆದ್ದರಿಂದ ನೀವು ಆ ಸಾಲಿನಲ್ಲಿ ಸೇರಿದ್ದೀರಿ” ಎಂದು ಅವರು ಹೇಳಿದರು. ಈ ಹೇಳಿಕೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಕನ್ನಡ ರಕ್ಷಣಾ ವೇದಿಕೆಯಂತಹ ಕನ್ನಡ ಪರ ಸಂಘಟನೆಗಳು ಈ ಹೇಳಿಕೆಗಳನ್ನು ಖಂಡಿಸಿ, ಕಮಲ್ ಹಾಸನ್ ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular