HomeLatest NewsBREAKING: ಐಸಿಸಿ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ಟೀಮ್ ಇಂಡಿಯಾ 'ನಂಬರ್ 1'

BREAKING: ಐಸಿಸಿ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ಟೀಮ್ ಇಂಡಿಯಾ ‘ನಂಬರ್ 1’

ಟೀಮ್ ಇಂಡಿಯಾ, ಐಸಿಸಿ ಟೆಸ್ಟ್ ರಾಂಕಿಂಗ್ ನ ಎಲ್ಲ ವಿಭಾಗಗಳಲ್ಲೂ ನಂಬರ್ ಒನ್ ಪಟ್ಟ ಪಡೆದುಕೊಂಡಿದ್ದು, ಈ ಮೂಲಕ ಇಂಥದೊಂದು ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಎರಡನೇ ಹಾಗೂ ಏಷ್ಯಾದ ಮೊದಲ ಕ್ರಿಕೆಟ್ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ಟೆಸ್ಟ್, ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದು, ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಈ ಮೊದಲು ಇಂಥದ್ದೊಂದು ಸಾಧನೆಯನ್ನು ದಕ್ಷಿಣ ಆಫ್ರಿಕಾ ಮಾಡಿದ್ದು, ಇದೀಗ ಟೀಮ್ ಇಂಡಿಯಾ ಈ ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಎರಡನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಅಲ್ಲದೆ ಏಷ್ಯಾದ ಮೊದಲ ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾಗೆ ಲಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular