ಬೆಂಗಳೂರು : ಬೇಸಿಗೆಯ ಬಿಸಿಲಿಗೆ ಅಂತರ್ಜಲ ಮಟ್ಟ ಕುಸಿದು ನಗರದಲ್ಲಿ ನೀರಿನ ಅಭಾವ ತಲೆದೂರಿರುವ ಬೆನ್ನಲ್ಲೇ, ಖಾಸಗಿ ಟ್ಯಾಂಕರ್ಗಳ ದರ ಸಮರಕ್ಕೆ ಕಡಿವಾಣ ಹಾಕಲು ಜಲಮಂಡಳಿ ಮುಂದಾಗಿದೆ. ನೀರಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡು ಜನಸಾಮಾನ್ಯರನ್ನು ಲೂಟಿ ಮಾಡುತ್ತಿರುವ ಖಾಸಗಿ ಟ್ಯಾಂಕರ್ಗಳ ಹಾವಳಿಯನ್ನು ತಪ್ಪಿಸಲು ಈಗ ‘ಕಾವೇರಿ ಆನ್ ವ್ಹೀಲ್ಸ್’ (Cauvery on Wheels) ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆಗೊಂಡಿದೆ. ಈ ಆ್ಯಪ್ ಮೂಲಕ ಸಾರ್ವಜನಿಕರು ಸುಲಭವಾಗಿ ನೀರಿನ ಟ್ಯಾಂಕರ್ ಬುಕ್ ಮಾಡಬಹುದಾಗಿದ್ದು, ನಿಗದಿತ ದರದಲ್ಲಿ ನೇರವಾಗಿ ಮನೆ ಬಾಗಿಲಿಗೆ ಕಾವೇರಿ ನೀರನ್ನು ಪಡೆಯಬಹುದಾಗಿದೆ.
ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಖಾಸಗಿ ಟ್ಯಾಂಕರ್ಗಳು ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ಕಾವೇರಿ ಆನ್ ವ್ಹೀಲ್ಸ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು ಬರಲಿದೆ.
ಖಾಸಗಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ: ಖಾಸಗಿ ಟ್ಯಾಂಕರ್ ಮಾಫಿಯಾವನ್ನು ನಿಯಂತ್ರಿಸಲು ಮತ್ತು ನಾಗರಿಕರಿಗೆ ನ್ಯಾಯಯುತ ಬೆಲೆಯಲ್ಲಿ ನೀರು ಒದಗಿಸಲು ಸರ್ಕಾರ ಈ ಉಪಕ್ರಮವನ್ನು ಕೈಗೊಂಡಿದೆ.
‘ಕಾವೇರಿ ಆನ್ ವೀಲ್ಸ್’ ಸೇವೆ: ‘ಕಾವೇರಿ ಆನ್ ವೀಲ್ಸ್’ (Mobile Cauvery) ಮೊಬೈಲ್ ಅಪ್ಲಿಕೇಶನ್ ಮೂಲಕ ನೀರನ್ನು ಬುಕ್ ಮಾಡಬಹುದು.
ನಿರ್ದಿಷ್ಟ ದರಗಳು: 4,000 ಲೀಟರ್ಗೆ ₹660, 5,000 ಲೀಟರ್ಗೆ ₹700, 6,000 ಲೀಟರ್ಗೆ ₹740, ಮತ್ತು 12,000 ಲೀಟರ್ಗೆ ₹1,290 ದರಗಳನ್ನು ನಿಗದಿಪಡಿಸಲಾಗಿದೆ.

