HomeKarnatakaಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ನಿಗದಿತ ಅವಧಿಯಲ್ಲಿ ಆಹಾರಧಾನ್ಯ ವಿತರಣೆ

ಬಿಪಿಎಲ್ ಕಾರ್ಡ್ ಸೇರಿ ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್: ನಿಗದಿತ ಅವಧಿಯಲ್ಲಿ ಆಹಾರಧಾನ್ಯ ವಿತರಣೆ

ಸಾರ್ವಜನಿಕ ವಿತರಣಾ ಪದ್ಧತಿಯಡಿ ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆ ಕಾರ್ಯವನ್ನು ಈ ಹಿಂದೆ ಎನ್‍ಐಸಿ ತಂತ್ರಾಂಶದಿಂದ ನಿರ್ವಹಿಸಲಾಗುತ್ತಿತ್ತು.

ಆದರೆ, ರಾಜ್ಯಾದ್ಯಂತ ಅಕ್ಟೋಬರ್ ಮಾಹೆಯಿಂದ ಎನ್‍ಐಸಿ ತಂತ್ರಾಂಶದಿಂದ ಬೇರ್ಪಡಿಸಿ ಕರ್ನಾಟಕ ಸ್ಟೇಟ್ ಡೆಟಾ ಸೆಂಟರ್(ಕೆಎಸ್‍ಡಿಸಿ)ನಿಂದ ಪಡಿತರ ವಿತರಣೆ ಕಾರ್ಯವನ್ನು ನಿರ್ವಹಿಸುತ್ತಿರುವುದರಿಂದ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ವರ್ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ಈಗಾಗಲೇ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದ್ದು, ಕಾರ್ಡುದಾರರು ಆಂತಕಪಡುವ ಅಗತ್ಯವಿಲ್ಲ.

ಅಕ್ಟೋಬರ-2024ನೇ ಮಾಹೆಯ ಪಡಿತರ ವಿತರಣೆಯನ್ನು ನಿಗದಿತ ಅವಧಿಯೊಳಗಾಗಿ ಕಾರ್ಡುದಾರರಿಗೆ ವಿತರಿಸಲಾಗುವುದು. ಆದ್ದರಿಂದ ಕಾರ್ಡುದಾರರು ಆತಂಕಕ್ಕೆ ಒಳಗಾಗಬಾರದೆಂದು ಧಾರವಾಡ ಆಹಾರ, ನಾಗರಿಕ ಸರಬರಾಜು ಮತ್ತು  ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular