ಬಾರ್ಡರ್-2 ಸಿನಿಮಾ ಬಾಲಿವುಡ್‌ಗೆ ಮತ್ತಷ್ಟು ಬಲವನ್ನು ತಂದುಕೊಟ್ಟಿದೆ. ಈಗಾಗಲೇ ಚಿತ್ರ ಭಾರೀ ಸುದ್ದಿ, ಸದ್ದು ಮಾಡುತ್ತಿದೆ. ಚಿತ್ರದ ಗಳಿಕೆ ಭಾರತದಲ್ಲಿ 100 ಕೋಟಿ ರೂ. ಬಾರ್ಡರ್ ದಾಟಿದ್ದು, 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಗಳು ಹೇಳುತ್ತಿವೆ.
ಈ ಚಿತ್ರವು 4 ದಿನಗಳ ಯಶಸ್ವಿಯಾಗಿ ಓಡಿದ್ದು, ವಾರಾಂತ್ಯದ ಸರಣಿ ರಜೆಯ ಕಾರಣದಿಂದ ಯಶಸ್ವಿಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದೆ. ಚಿತ್ರದ ದೇಶಭಕ್ತಿಯ ವಿಷಯ ಮತ್ತು ಗಣರಾಜ್ಯೋತ್ಸವ 2026ರ ಸಂದರ್ಭದಲ್ಲಿ ಬಿಡುಗಡೆಯಾದ ಕಾರಣ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.
ಭಾರತದಲ್ಲಿ 30 ಕೋಟಿ ರೂಪಾಯಿಗಳ ಗಳಿಕೆ ಮೂಲಕ ಬಾರ್ಡರ್-2 ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರಾರಂಭವಾಯಿತು. ಬಳಿಕ ಸರಣಿ ರಜೆ ಇದ್ದ ಕಾರಣ ಚಿತ್ರದ ಗಳಿಕೆಯಲ್ಲಿ ಭಾರೀ ಏರಿಕೆ ಕಂಡಿದೆ.
ಬಾರ್ಡರ್-2 ವಿಶೇಷವಾಗಿ ಭಾನುವಾರ ಮತ್ತು ಸೋಮವಾರದಂದು ಹೆಚ್ಚಿನ ಕೆಲೆಕ್ಷನ್ ಮಾಡಿದ್ದು, ತಲಾ 50 ಕೋಟಿ ಕಲೆಕ್ಷನ್ ಆಗಿದೆ ಎಂದು ವರದಿ ಹೇಳಿದೆ. ಜನವರಿ 26ರ ಗಣರಾಜ್ಯೋತ್ಸವದ ಬಳಿಕ ಚಿತ್ರದ ಶೋಗಳ ಸಂಖ್ಯೆ ಸಹ ಕಡಿಮೆಯಾಗಿದೆ.
ಜನವರಿ 23ರಂದು ಬಾರ್ಡರ್-2 ತೆರೆಗೆ ಬಂದಿತ್ತು. ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಬಹಳ ಚೆನ್ನಾಗಿತ್ತು. ಆದ್ದರಿಂದ ನಿರಂತರವಾಗಿ 4 ದಿನ ಉತ್ತಮ ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ.
Sacnilk ವರದಿಯ ಪ್ರಕಾರ ಬಾರ್ಡರ್-2 ಭಾನುವಾರ 54.5 ಕೋಟಿ ಮತ್ತು ಸೋಮವಾರ 59 ಕೋಟಿ ರೂ. ಕಲೆಕ್ಷನ್ ಮೂಲಕ 100 ಕೋಟಿಯ ಬಾರ್ಡರ್ ದಾಟಿದೆ. ಆದರೆ ಮಂಗಳವಾರ ರಜೆಗಳು ಮುಗಿದ ಕಾರಣ ಚಿತ್ರದ ಕಲೆಕ್ಷನ್ ಕಡಿಮೆಯಾಗಿದೆ.
ಮಂಗಳವಾರ ಬಾರ್ಡರ್-2 ಚಿತ್ರದಗಳಿಕೆ 19.5 ಕೋಟಿ ರೂ.ಗಳು. ಭಾರತದಲ್ಲಿಯೇ ಸಿನಿಮಾ 196.5 ಕೋಟಿ ರೂ.ಗಳನ್ನು ಗಳಿಸಿದೆ. ಒಂದೇ ದಿನ 59 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಚಿತ್ರ ಹೊಸ ದಾಖಲೆ ಮಾಡಿದೆ.
ವಾರದ ದಿನದಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡಿದ ಬಾರ್ಡರ್-2 ಸಿನಿಮಾವೊಂದಕ್ಕೆ ಹೊಸ ದಾಖಲೆ ಬರೆದಿದೆ. ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಮಂಗಳವಾರದ 19.5 ಕೋಟಿ ರೂಪಾಯಿ ಕೊಂಚ ಕಡಿಮೆ ಆದರೆ, ಸಿನಿಮಾವೊಂದರ ಗಳಿಕೆಯಲ್ಲಿ ಇದು ಹೆಚ್ಚು.
ವಿಶ್ವದಾದ್ಯಂತ ಬಾರ್ಡರ್-2 5 ದಿನದಲ್ಲಿ 270 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ಚಿತ್ರ ತಂಡ ಮತ್ತು Sacnilk ಚಿತ್ರದ ಕಲೆಕ್ಷನ್ ಬಗ್ಗೆ ಬೇರೆ ಬೇರೆ ಅಂಕಿ ಸಂಖ್ಯೆಗಳನ್ನು ನೀಡಿದೆ. ಆದರೆ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿರುವುದಂತೂ ಸತ್ಯ.
ಬಾರ್ಡರ್-2 ಚಿತ್ರದ ನಿರ್ದೇಶಕರು ಅನುರಾಗ್ ಸಿಂಗ್. 1997ರಲ್ಲಿ ತೆರಗೆ ಬಂದ ಬಾರ್ಡರ್ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ ಸೀಕ್ವೆಲ್ ಆಗಿ ಬಾರ್ಡರ್-2 ನಿರ್ಮಾಣ ಮಾಡಲಾಗಿದೆ.
ಚಿತ್ರದ ನಾಯಕ ಸನ್ನಿ ಡಿಯೋಲ್. ಚಿತ್ರದಲ್ಲಿ ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ನಟಿಸಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿರುವ ಬಾರ್ಡರ್-2 ಒಟಿಟಿಗೆ ಯಾವಾಗ ಬರುತ್ತದೆ? ಎಂದು ಗೂಗಲ್‌ನಲ್ಲಿ ಈಗಾಗಲೇ ಹುಡುಕಾಟ ಆರಂಭವಾಗಿದೆ.

