ಪಂಜಾಬ್ : ದೇಶದಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಗಳು ಮುಂದುವರೆದಿದ್ದು, ಪಂಜಾಬ್ ನಲ್ಲಿ ಶಾಲೆ, ರೈಲು ನಿಲ್ದಾಣ ಸ್ಪೋಟಿಸುವುದಾಗಿ ಇ ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಪಂಜಾಬ್ನ ಪಟಿಯಾಲಾದ ಶಾಲೆಗಳು ಮತ್ತು ಕಾಲೇಜುಗಳಿಗೆ , ರೈಲು ನಿಲ್ದಾಣಗಳಿಗೆ ಖಲಿಸ್ತಾನಿ ಗುಂಪು ಬಾಂಬ್ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದೆ ಎನ್ನಲಾದ ವರದಿಗಳು ಭದ್ರತಾ ಎಚ್ಚರಿಕೆಯನ್ನು ನೀಡಿವೆ.
ಮಧ್ಯಾಹ್ನ 1 ರಿಂದ ರಾತ್ರಿ 9 ರ ನಡುವೆ ಅನೇಕ ಶಿಕ್ಷಣ ಸಂಸ್ಥೆಗಳು ಮತ್ತು ರೈಲ್ವೆ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಸ್ಫೋಟಗಳು ಸಂಭವಿಸುವ ಬಗ್ಗೆ ಇಮೇಲ್ಗಳು ಎಚ್ಚರಿಕೆ ನೀಡಿವೆ. ಶಾಲಾ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಪೊಲೀಸರು ಕ್ರಮ ಕೈಗೊಂಡರು ಮತ್ತು ಜಿಲ್ಲೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

