ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಕುಟುಂಬ ಕಲ್ಯಾಣ ಇಲಾಖೆಗೆ ಬಾಂಬ್ ಬೆದರಿಕೆ ಬಂದಿದ್ದು, ಸಿಬ್ಬಂದಿಗಳು ಭಯದಿಂದ ಹೊರಗೆ ಓಡಿದ್ದಾರೆ.
ಅನಾಮಧೇಯ ಹೆಸರಿನಲ್ಲಿ ಲಖನೌ ನ ಜಗತ್ ನಾರಾಯಣ ರಸ್ತೆಯಲ್ಲಿರುವ ಕುಟುಂಬ ಕಲ್ಯಾಣಚೇರಿಗೆ ಬೆದರಿಕೆ ಇ ಮೇಲ್ ಸಂದೇಶ ಬಂದಿದ್ದು, ಮಧ್ಯಾಹ್ನ 1 :30 ಕ್ಕೆ ಕಚೇರಿಗೆ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ಸಂದೇಶ ನೋಡುತ್ತಿದ್ದಂತೆ ಕಚೇರಿಯಿಂದ ಸಿಬ್ಬಂದಿಗಳು ಹೊರಗೆ ಓಡಿದ್ದಾರೆ.
ಕೂಡಲೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಗೆ ಸುದ್ದಿ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ತಂಡ ಪರಿಶೀಲನೆ ನಡೆಸುತ್ತಿದೆ.

