HomeEntertainmentನಟಿಯರು ಮಕ್ಕಳನ್ನ ಮಲಗಿಸೋದು ಹೇಗೆ ಗೊತ್ತಾ ? ಜೆಮಿ ಲಿವರ್ ಮಿಮಿಕ್ರಿ ವಿಡಿಯೋ ನೋಡಿ ನಕ್ಕು...

ನಟಿಯರು ಮಕ್ಕಳನ್ನ ಮಲಗಿಸೋದು ಹೇಗೆ ಗೊತ್ತಾ ? ಜೆಮಿ ಲಿವರ್ ಮಿಮಿಕ್ರಿ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾದ ಜನ

ಬಾಲಿವುಡ್ ಹಾಸ್ಯನಟ ಜಾನಿ ಲಿವರ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮದೇ ಆಗಿರೋ ಮ್ಯಾನರಿಸಂ ಇಟ್ಟಕೊಂಡು ಜನರನ್ನ ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸುವ ಕಲೆಗಾರ. ಇದೇ ಜಾನಿ  ಲಿವರ್ ಮಗಳು ಜೆಮಿ ಲಿವರ್ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೊದಲ್ಲಿ ಜೆಮಿ ಲಿವರ್ ನಟಿ ಪ್ರಿಯಾಂಕಾ ಛೋಪ್ರಾ, ನಟಿ ಸೋನಂ ಕಪೂರ್, ನಟಿ ಕರೀನಾ ಕಪೂರ್ ಹಾಗೂ ನಿರ್ದೆಶಕಿ ಫರ್ಹಾ ಖಾನ್ ಅವರ ಮಿಮಿಕ್ರಿ ಮಾಡಿ ತೋರಿಸಿದ್ದಾರೆ. ಈ ಮೂವರಿಗೂ ಪುಟ್ಟ ಪುಟ್ಟ ಮಕ್ಕಳಿದ್ದು, ಅವರು ತಮ್ಮ ಮಕ್ಕಳನ್ನ ಹೇಗ್ಹೇಗೆ ಮಲಗಿಸುತ್ತಾರೆ. ಆ ಸಮಯದಲ್ಲಿ ಅವರು ಏನೇನು ಹೇಳ್ಬಹುದು ಅನ್ನೊದನ್ನ, ಇಲ್ಲಿ ಮಿಮಿಕ್ರಿ ಮಾಡಿ ತೋರಿಸಲಾಗಿದೆ. ಈ ವಿಡಿಯೋ ನೆಟ್ಟಿಗರು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಕರೀನಾ ಕಪೂರ್, ಪ್ರಿಯಾಂಕಾ ಛೋಪ್ರಾ, ಸೋನಂ ಕಪೂರ್, ಈ ಮೂವರೂ ನಟಿಯರು ಮಾತನಾಡುವ ಶೈಲಿಯನ್ನ ಜೆಮಿ ಯಥಾವತ್ ಕಾಪಿ ಮಾಡಿ ಮಾತನಾಡಿದ್ದಾರೆ. ಇನ್ನೂ ಫರ್ಹಾ ಖಾನ್ ಸ್ಟೈಲ್ ನೋಡಿದ್ರಂತೂ ಯಾರಿಂದಲೂ ನಗು ತಡೆದುಕೊಳ್ಳೊದಕ್ಕಾಗೊಲ್ಲ ಆ ರೀತಿ ಕಾಪಿ ಮಾಡಿದ್ದಾರೆ ಜೆಮಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೆಮಿ, ತಂದೆ ಜಾನಿ ಲಿವರ್‌ ರಂತೆಯೇ ನಗಿಸೋದ್ರಲ್ಲಿ ಪಂಟರ್ ಆಗಿದ್ದಾರೆ. ಇವರು ಕೆಲ ಸಿನೆಮಾಗಳಲ್ಲೂ ಜನರನ್ನ ರಂಜಿಸಿದ್ದಾರೆ. ಇನ್ನೂ ಜೆಮಿ ಗಾಯಕಿ ಆಶಾಬೋಸ್ಲೆಯವರ ಮಿಮಿಕ್ರಿ ಮಾಡುವುದ್ರಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇವರ ಈ ರೀತಿಯ ಇನ್ನೂ ಅನೇಕ ಕಾಮಿಡಿ ವಿಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಅಂತಹ ವಿಡಿಯೋಗಳಲ್ಲಿ ಇದೂ ಒಂದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular