ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಲ್ಲಿ ಹೊಸ ಬಸ್ ಸೇವೆಯೊಂದನ್ನು ಪ್ರಾರಂಭಿಸಿದೆ. ವಿಜಯನಗರ-ಎಲೆಕ್ಟ್ರಾನಿಕ್ ಸಿಟಿ ನಡುವೆ ಬಸ್‌ಗಳು ಸಂಚಾರವನ್ನು ನಡೆಸಲಿವೆ.
ಈ ಮಾರ್ಗ NICE-4. ಮಾರ್ಚ್ 5ರಿಂದ ಬಸ್ ಸಂಚಾರ ಪ್ರಾರಂಭವಾಗಿದೆ. ಒಟ್ಟು 2 ಟ್ರಿಪ್ ಈ ಮಾರ್ಗದಲ್ಲಿ ಬಸ್‌ಗಳು ಸಂಚಾರವನ್ನು ನಡೆಸಲಿವೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಹೇಳಿದೆ.
ಈಗಾಗಲೇ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ಗೆ ಬಿಎಂಟಿಸಿ ಹಲವು ಬಸ್‌ಗಳನ್ನು ಓಡಿಸುತ್ತಿದೆ. ಈಗ ವಿಜನಯನಗರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ.
ವಿಜಯನಗರದಿಂದ ಹೊರಡುವ ಬಸ್ ಚಂದ್ರಾ ಲೇಔಟ್, ನಾಯಂಡಹಳ್ಳಿ ಜಂಕ್ಷನ್ ಮೂಲಕ ಸಂಚಾರವನ್ನು ನಡೆಸಲಿದೆ ಎಂದು ಬಿಎಂಟಿಸಿ ತಿಳಿಸಿದೆ.
ವಿಜನಗರ ಟಿಟಿಎಂಸಿಯಿಂದ ಬಸ್ 6.25ಕ್ಕೆ ಹೊರಡಲಿದೆ. ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್‌ನಿಂದ 16.35ಕ್ಕೆ ಹೊರಡಲಿದೆ ಎಂದು ಪ್ರಕಟಣೆ ಹೇಳಿದೆ.

