HomeJobsಬಿಎಂಟಿಸಿ ಲಘು, ಭಾರೀ ವಾಹನ ತರಬೇತಿ; ಅರ್ಜಿ ಸಲ್ಲಿಸಲು ನಿಯಮಗಳು

ಬಿಎಂಟಿಸಿ ಲಘು, ಭಾರೀ ವಾಹನ ತರಬೇತಿ; ಅರ್ಜಿ ಸಲ್ಲಿಸಲು ನಿಯಮಗಳು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ವಡ್ಡರಹಳ್ಳಿ ತರಬೇತಿ ಕೇಂದ್ರದಲ್ಲಿ ಜನರಿಗೆ ಲಘು ಮತ್ತು ಭಾರೀ ವಾಹನ ಚಾಲನಾ ತರಬೇತಿಯನ್ನು ನೀಡಲಿದೆ. ತರಬೇತಿ ಪಡೆಯಲು ಆಸಕ್ತಿ ಹೊಂದಿರುವವರು ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ವಿಧಾನ, ಅಗತ್ಯ ದಾಖಲೆಗಳು, ವಯೋಮಿತಿ ಮುಂತಾದ ವಿವರಗಳನ್ನು ಬಿಎಂಟಿಸಿ ನೀಡಿದೆ. ಇದು ವಸತಿ ಸಹಿತ/ ರಹಿತ ತರಬೇತಿಯಾಗಿದ್ದು, 30 ದಿನದ ತರಬೇತಿ ಮುಗಿಸಿದವರಿಗೆ ಲೈಸೆನ್ಸ್ ನೀಡಲಾಗುತ್ತದೆ.

ದಾಖಲೆಗಳ ವಿವರ: ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ವರ್ಷ ತುಂಬಿರಬೇಕು. ಭಾರೀ ವಾಹನ ಚಾಲನಾ ತರಬೇತಿ ಪಡೆಯಲು 20 ವರ್ಷ ತುಂಬಿರಬೇಕು ಹಾಗೂ ಮೂಲ ಲಘು ವಾಹನ ಪರವಾನಗಿ ಮತ್ತು ಪರವಾನಗಿ ಪಡೆದು ಒಂದು ವರ್ಷದ ಅವಧಿ ಪೂರ್ಣಗೊಂಡಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿಯೊಂದಿಗೆ ಜನ್ಮ ದಿನಾಂಕದ ಬಗ್ಗೆ ಜನನ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವ ಶಾಲಾ ವರ್ಗಾವಣೆ ಪತ್ರ (ಟಿಸಿ) ಸಲ್ಲಿಸಬೇಕು. ಆಧಾರ್ ಕಾರ್ಡ್ ನಕಲು ಪ್ರತಿ, 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಕೆ ಮಾಡಬೇಕು.

ತರಬೇತಿ ವಿವರಗಳು: 30 ದಿನಗಳು ಚಾಲನಾ ತರಬೇತಿ ನೀಡಿ ಡ್ರೈವಿಂಗ್ ಲೈಸೆನ್ಸ್ ಕೊಡಿಸಲಾಗುತ್ತದೆ. ವಸತಿ ಸಹಿತ ಲಘು ವಾಹನ ತರಬೇತಿ ಶುಲ್ಕ 13,000 ರೂ.ಗಳು. ಭಾರೀ ವಾಹನ 16,700 ರೂ.ಗಳು. ವಸತಿ ರಹಿತ ಲಘು ವಾಹನ ತರಬೇತಿ 7000 ರೂ.ಗಳು, ಭಾರೀ ವಾಹನ 11,000 ರೂ.ಗಳು.

ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ 6 ದಿನಗಳ ಚಾಲನಾ ಕೌಶಲ್ಯ ಅಭಿವೃದ್ಧಿ ತರಬೇತಿ. ವಸತಿ ಸಹಿತ ಲಘು ವಾಹನ ತರಬೇತಿ 4,250 ರೂ.ಗಳು. ಮತ್ತು ಭಾರೀ ವಾಹನ ತರಬೇತಿ 6000 ರೂ.ಗಳು. ವಸತಿ ರಹಿತ ಲಘು ವಾಹನ ತರಬೇತಿ 3,000 ರೂ.ಗಳು ಮತ್ತು ಭಾರೀ 5,000 ರೂ.ಗಳು.

ಭಾನುವಾರ ರಜಾ ದಿನ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು 7760991085, 6364858520 (ಕಚೇರಿ ವೇಳೆಯಲ್ಲಿ ಮಾತ್ರ). ಕಚೇರಿಯ ವಿಳಾಸ ಚಾಲಕರ ತರಬೇತಿ ಕೇಂದ್ರ, ವಡ್ಡರಹಳ್ಳಿ, ಮಾಗಡಿ ಮುಖ್ಯ ರಸ್ತೆ, ಕಡಬಗೆರೆ ಕ್ರಾಸ್, ಬೆಂಗಳೂರು-562130.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular