ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ.
5 ರೂ ಚಿಲ್ಲರೆ ಕೊಡುವ ವಿಚಾರಕ್ಕೆ ಕಂಡಕ್ಟರ್ ಅಭಿನವ್ ರಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಗಸ್ಟ್ 6 ರಂದು ಅಭಿನವ್ ರಾಜ್ ಮೇಲೆ ಹಲ್ಲೆ ನಡೆದಿತ್ತು, ನಂತರ ಅಭಿನವ್ ಬಿಎಂಟಿಸಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಬಿಎಂಟಿಸಿ ಕಂಡಕ್ಟರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಆ ವ್ಯಕ್ತಿಯು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ನ್ಯಾಯಕ್ಕೆ ಆಗ್ರಹಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.ಮಂಗಳವಾರ ರಾತ್ರಿ ಮಾರತ್ತಹಳ್ಳಿಯ ರೇನ್ಬೋ ಆಸ್ಪತ್ರೆಯ ಬಳಿ ಈ ಹಲ್ಲೆ ನಡೆದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವೀಡಿಯೊದಲ್ಲಿ, ಬಸ್ ಕಂಡಕ್ಟರ್ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದನ್ನು ಕಾಣಬಹುದು.
‘ಬೆಂಗಳೂರಿನ ಮಾರತ್ತಹಳ್ಳಿಯ ರೇನ್ಬೋ ಆಸ್ಪತ್ರೆ ಬಳಿ ಬಿಎಂಟಿಸಿ ಬಸ್ನಲ್ಲಿ ನನ್ನ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ್ದಾನೆ. ನನಗೆ ಚಿಲ್ಲರೆ ನೀಡಲು ಅಥವಾ ಯುಪಿಐ ಮೂಲಕ ಪಾವತಿ ತೆಗೆದುಕೊಳ್ಳಲು ನಿರಾಕರಿಸಿದ ನಂತರ, ಬಿಎಂಟಿಸಿ ಕಂಡಕ್ಟರ್ ನನ್ನ ಮೇಲೆ ಹಲ್ಲೆ ನಡೆಸಿದರು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಪೋಸ್ಟ್ ಹಂಚಿಕೊಂಡಿದ್ದರು.
I was assaulted on a BMTC bus near Rainbow Hospital, Marathahalli, Bengaluru last night by the conductor.
After refusing to give me change or taking payment by UPI, the BMTC conductor assaulted me and verbally abused me. Attaching the video here.@bmtc_bengaluru (1/5) pic.twitter.com/FAF1e5SdFn
— abhinav raj (@abhinavraj46674) August 7, 2024

