HomeKarnatakaಸೈಕಲ್ ಜಾಥಾ ಪ್ರತಿಭಟನೆಗೂ ಅವಕಾಶ ನೀಡದ ಸರ್ಕಾರ: ರಾಜ್ಯದ ಜನ ದಂಗೆ ಏಳುವ ಸಮಯ ಬಂದಿದೆ:...

ಸೈಕಲ್ ಜಾಥಾ ಪ್ರತಿಭಟನೆಗೂ ಅವಕಾಶ ನೀಡದ ಸರ್ಕಾರ: ರಾಜ್ಯದ ಜನ ದಂಗೆ ಏಳುವ ಸಮಯ ಬಂದಿದೆ: ಬಿಜೆಪಿ ಆಕ್ರೋಶ

ಬೆಂಗಳೂರು: ಬಿಜೆಪಿ ಕಾರ್ಯಕರ್ತರು, ನಾಯಕರು ಬೆಲೆ ಏರಿಕೆ ವಿರೋಧಿಸಿ ಶಾಂತಿಯುತವಾಗಿ ಸೈಕಲ್‌ ಮೂಲಕ ಪ್ರತಿಭಟನೆ ಮಾಡುತ್ತಿದ್ದರೆ, ಸರ್ವಾಧಿಕಾರಿ ಸಿದ್ದರಾಮಯ್ಯ ಅವರ ತುಘಲಕ್‌ ಸರ್ಕಾರ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಬಂಧಿಸಿದೆ ಎಂದು ರಾಜ್ಯ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃವದಲ್ಲಿ ಬಿಜೆಪಿ ಸೈಕಲ್ ಜಾಥಾ ನಡೆಸಲು ಮುಂದಾಗಿತ್ತು. ಬಿಜೆಪಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾಗೆ ಯತ್ನಿಸಿದ್ದ ಬಿ.ವೈ.ವಿಜಯೇಂದ್ರ, ಸಿ.ಟಿ.ರವಿ, ಅಶ್ವತ್ಥನಾರಾಯಣ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಗೂ ಅವಕಾಶ ನೀಡದ ಸರ್ಕಾರದ ಕ್ರಮವನ್ನು ಬಿಜೆಪಿ ಖಂಡಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶ ಕೊಡದೆ ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ತನ್ನ ಸಂವಿಧಾನ ವಿರೋಧಿ ನೀತಿಯನ್ನು ತೋರಿಸಿದೆ. ನಾಡಿನ ಜನರು ಸರ್ಕಾರದ ವಿರುದ್ಧ ದಂಗೆ ಏಳುವ ಸಮಯ ಸನ್ನಿಹಿತವಾಗಿದೆ ಎಂದು ಕಿಡಿಕಾರಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular