HomeLatest NewsBREAKING: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗುವಿಗೆ ಜನ್ಮ ನೀಡಿದ...

BREAKING: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ!

ಮಂಗಳೂರು: ಬಿಜೆಪಿ ಮುಖಂಡನ ಪುತ್ರನಿಂದ ಯುವತಿ ಗರ್ಭವತಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಕೃಷ್ಣ ಜೆ.ರಾವ್ ಎಂಬಾತ, ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ. ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭವತಿಯನ್ನಾಗಿ ಮಾಡಿ ಬಳಿಕ ಕೈಕೊಟ್ಟಿದ್ದಾನೆ. ಯುವತಿ ಗರ್ಭವತಿಯಾಗುತ್ತಿದ್ದಂತೆ ಮದುವೆಯಾಗಲು ನಿರಾಕರಿಸಿರುವ ಯುವಕ ನಾಪತ್ತೆಯಾಗಿದ್ದಾನೆ.

ಯುವಕನಿಂದ ಮೋಸ ಹೋದ ಯುವತಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆರೋಪಿ ಯುವಕ ಮಗುವನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ಕೃಷ್ಣ ಜೆ. ರಾವ್ ವಿರುದ್ಧ ಲವ್-ಸೆಕ್ಸ್-ದೋಖಾ ಕೇಸ್ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಯುವಕ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಡಿಎನ್ ಎ ಪರೀಕ್ಷೆ ಮೂಲಕ ಪ್ರಕರಣ ಭೇದಿಸಲು ಮುಂದಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಗೆ ಕೃಷ್ಣ ಜೆ.ರಾವ್, ಹೈಸ್ಕೂಲು ಓದುವಾಗಲೇ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೃಷ್ಣ ಜೆ.ರಾವ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನ ಮನೆಗೆ ಕರೆದೊಯ್ದು 2024ರ ಅಕ್ಟೋಬರ್ ನಲ್ಲಿ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಬಳಿಕ 2025 ರ ಜನವರಿಯಲ್ಲಿಯೂ ಮತ್ತೆ ಮನೆಗೆ ಕರೆಸಿ ದೈಹಿಕ ಸಂಪರ್ಕ ನಡೆಸಿದ್ದು. ಆ ಬಳಿಕ ಯುವತಿ ಗರ್ಭವತಿಯಾಗಿದ್ದಾಳೆ. ಯುವತಿ ಗರ್ಭವತಿಯಾಗುತ್ತಿದ್ದಂತೆ ಆರೋಪಿ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular