HomeLatest NewsBREAKING: ಅಂಬೋಲಿ ಫಾಲ್ಸ್ ನಲ್ಲಿ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದ ವ್ಯಕ್ತಿ ಸಾವು!

BREAKING: ಅಂಬೋಲಿ ಫಾಲ್ಸ್ ನಲ್ಲಿ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದ ವ್ಯಕ್ತಿ ಸಾವು!

ಬೆಳಗಾವಿ: ಧಾರಾಕಾರ ಮಳೆಯ ನಡುವೆಯೂ ಫಾಲ್ಸ್ ನೋಡಲು ಹೋಗಿದ್ದ ಪ್ರವಾಸಿಗ ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಅಂಬೋಲಿ ಫಾಲ್ಸ್ ನಲ್ಲಿ ನಡೆದಿದೆ.

ಮಳೆಗಾಲದಲ್ಲಿ ಜಲಪಾತಗಳು ಧುಮ್ಮಿಕ್ಕಿ ಹರಿಯುವ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಅಪಾಯವನ್ನೂ ಲೆಕ್ಕಿಸದೇ ಫಾಲ್ಸ್ ನೋಡಲು ಹೋಗಿ ಹಲವರು ಜೀವವನ್ನೇ ಕಳೆದುಕೊಳ್ಳುತ್ತಿರುವ ಘಟನೆ ವರದಿಯಾಗುತ್ತಿದೆ. ಮಹಾರಾಷ್ಟ್ರ-ಬೆಳಗಾವಿ ಗಡಿಯಲ್ಲಿರುವ ಅಂಬೋಲಿ ಫಾಲ್ಸ್ ಗೆ ಸಹೋದ್ಯೋಗಿಗಳೊಂದಿಗೆ ಹೋಗಿದ್ದ ವ್ಯಕ್ತಿಯೊಬ್ಬರು ಕಾಲುಜಾರಿ 300 ಅಡಿ ಆಳಕ್ಕೆ ಬಿದ್ದು ನಾಪತ್ತೆಯಾಗಿ ಸಾವಾನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಸತತ ಕಾರ್ಯಾಚರಣೆ ಬಳಿಕ ವ್ಯಕ್ತಿಯ ಮೃತದೇಹನ್ನು ಮೇಲಕ್ಕೆತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಬೋಲಿ ಫಾಲ್ಸ್ ನ ಕವಲೇಸಾದ್ ಪಾಯಿಂಟ್ ನಲ್ಲಿ ಈ ದುರಂತ ಸಂಭವಿಸಿದೆ. ಕೊಲ್ಹಾಪುರ ನಿವಾಸಿ ಬಾಲಸೋ ಸಂಗರ್ (45) ಫಾಲ್ಸ್ ನ ಪ್ರಪಾತಕ್ಕೆ ಬಿದ್ದು ಮೃತಪಟ್ಟ ದುರ್ದೈವಿ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular