HomeLatest News'ರೀಲ್ಸ್  ಹುಚ್ಚಾಟ'ಕ್ಕೆ  ಬಿಜೆಪಿ ಮುಖಂಡನ ಪುತ್ರ ಬಲಿ : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸಿದ ಭೀಕರ ಅಪಘಾತ...

‘ರೀಲ್ಸ್  ಹುಚ್ಚಾಟ’ಕ್ಕೆ  ಬಿಜೆಪಿ ಮುಖಂಡನ ಪುತ್ರ ಬಲಿ : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸಿದ ಭೀಕರ ಅಪಘಾತ !

ಹುಬ್ಬಳ್ಳಿಯ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ 15 ವರ್ಷದ ಪುತ್ರ ನಮೀಶ್ ಸಂಗಳದ  ಸಾಮಾಜಿಕ ಜಾಲತಾಣಕ್ಕಾಗಿ ‘ಸ್ಟಂಟ್ ಮತ್ತು ಕ್ರ್ಯಾಶ್’ (Stunt and Crash) ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಹದಿಹರೆಯದವರಲ್ಲಿ ಹೆಚ್ಚುತ್ತಿರುವ ರೀಲ್ಸ್ ಕ್ರೇಜ್ ಮತ್ತು ಅಪಾಯಕಾರಿ ಸಾಹಸಗಳ ದುಷ್ಪರಿಣಾಮಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

ಏನಿದು ಘಟನೆ

ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದ ನಮೀಶ್, ಯುಗಾದಿ ಹಬ್ಬದ ರಜೆಗಾಗಿ ಹುಬ್ಬಳ್ಳಿಯ ಮನೆಗೆ ಬಂದಿದ್ದನು.ಗುರುವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಸೇರಿ ಹುಬ್ಬಳ್ಳಿಯ ಶೇಜವಾಡಕ್ಕರ್ ಪ್ಲಾಟ್ ಎಂಬಲ್ಲಿ ರೀಲ್ಸ್ ಚಿತ್ರೀಕರಿಸಲು ತೆರಳಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತಿ ವೇಗವಾಗಿ ಬರುತ್ತಿರುವ ಆಡಿ (Audi) ಕಾರು ಮತ್ತು ಬೈಕ್ ಮುಖಾಮುಖಿಯಾಗುವ ಅಥವಾ ಸಾಹಸ ಮಾಡುವ ದೃಶ್ಯವನ್ನು ಚಿತ್ರೀಕರಿಸುವುದು ಇವರ ಯೋಜನೆಯಾಗಿತ್ತು ಎನ್ನಲಾಗಿದೆ.ಈ ವೇಳೆ ವೇಗವಾಗಿ ಬಂದ ಆಡಿ ಕಾರು ನಮೀಶ್ ಚಲಾಯಿಸುತ್ತಿದ್ದ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಮೀಶ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆಘಾತಕಾರಿ ವಿಷಯವೆಂದರೆ, ಅಪಘಾತಕ್ಕೆ ಕಾರಣವಾದ ಆಡಿ ಕಾರನ್ನು ಚಲಾಯಿಸುತ್ತಿದ್ದವನು ಕೂಡ 15 ವರ್ಷದ ಅಪ್ರಾಪ್ತ ಬಾಲಕನೇ ಆಗಿದ್ದನು.ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಪ್ರಕರಣ ದಾಖಲು: ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರವಾನಗಿ ಇಲ್ಲದ ಅಪ್ರಾಪ್ತರಿಗೆ ಐಷಾರಾಮಿ ಕಾರು ನೀಡಿದವರ ವಿರುದ್ಧವೂ ತನಿಖೆ ನಡೆಯುತ್ತಿದೆ.ರೀಲ್ಸ್ ಮತ್ತು ಸಾಮಾಜಿಕ ಜಾಲತಾಣದ ಕ್ರೇಜ್‌ಗಾಗಿ ಯುವಕರು ಇಂತಹ ಅಪಾಯಕಾರಿ ಸಾಹಸಕ್ಕೆ ಕೈಹಾಕುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular