HomeKarnatakaಬಿಜೆಪಿ-ಜೆಡಿಎಸ್ ಮೈತ್ರಿ ಸೂತ್ರ: ಜೆಡಿಎಸ್‌ಗೆ ಸಿಗುವ 80 ಸೀಟುಗಳು!

ಬಿಜೆಪಿ-ಜೆಡಿಎಸ್ ಮೈತ್ರಿ ಸೂತ್ರ: ಜೆಡಿಎಸ್‌ಗೆ ಸಿಗುವ 80 ಸೀಟುಗಳು!

2028ರ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮುಂದಿನ ಚುನಾವಣೆಯಲ್ಲಿಯೂ ಮುಂದುವರೆಯಲಿದೆಯೇ? ಎಂಬ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಸೂತ್ರ, ಸೀಟು ಹಂಚಿಕೆ ಲೆಕ್ಕಾಚಾರದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಶ್ರೀನಿವಾಸ ಪಾಟೀಲ್ ಬಿಜೆಪಿ ಎಂಬ ಫೇಸ್‌ ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಳ್ಳಲಾಗಿದೆ. ‘2028ಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷಕ್ಕೆ ಸಿಗಬಹುದಾದ ಪಕ್ಕಾ ಕ್ಷೇತ್ರಗಳ ಮಾಹಿತಿ’ ಎಂದು ವಿವರ ನೀಡಲಾಗಿದೆ.

224 ಸೀಟುಗಳು ಮೈತ್ರಿಕೂಟದಲ್ಲಿ ಹಂಚಿಕೆಯಾಗಲಿದ್ದು, 144 ಬಿಜೆಪಿ, 80 ಸೀಟು ಜೆಡಿಎಸ್‌ಗೆ ಎಂದು ಈ ಪೋಸ್ಟ್‌ನಲ್ಲಿ ಲೆಕ್ಕಾಚಾರ ಹಾಕಲಾಗಿದೆ. ಎಲ್ಲೆಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಬಹುದು ಎಂದು ಅಂದಾಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2023ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಜೆಡಿಎಸ್ 19 ಸೀಟುಗಳಲ್ಲಿ ಗೆದ್ದಿತ್ತು. ಲೋಕಸಭೆ ಚುನಾವಣೆಯ ವೇಳೆಗೆ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿತು. ಮಂಡ್ಯದಿಂದ ಗೆದ್ದು ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುವ ಮೂಲಕ ಜೆಡಿಎಸ್ ಶಾಸಕರು ಸಂಖ್ಯೆ 18ಕ್ಕೆ ಇಳಿಕೆಯಾಯಿತು. 2028ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಸುದ್ದಿಗಳ ನಡುವೆಯೇ ಜೆಡಿಎಸ್‌ಗೆ 80 ಸೀಟುಗಳು ಎಂದು ಲೆಕ್ಕಾಚಾರ ಹಾಕಲಾಗಿದೆ.

ಯಾವ-ಯಾವ ಸೀಟುಗಳು?: ಮೈತ್ರಿ ಧರ್ಮದಂತೆ ಜೆಡಿಎಸ್‌ ಪಕ್ಷಕ್ಕೆ ಹಾಸನ, ಅರಸೀಕೆರೆ, ಅರಕಲಗೂಡು, ಬೇಲೂರು, ಹೊಳೆನರಸೀಪುರ, ಸಕಲೇಶಪುರ, ಶ್ರವಣಬೆಳಗೊಳ, ಮಂಡ್ಯ, ಮಳವಳ್ಳಿ, ಮದ್ದೂರು, ನಾಗಮಂಗಲ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಹುಣಸೂರು, ಚಾಮುಂಡೇಶ್ವರಿ, ಕೆ.ಆರ್. ನಗರ, ಟಿ.ನರಸೀಪುರ, ಪಿರಿಯಾಪಟ್ಟಣ, ಹೆಚ್‌.ಡಿ.ಕೋಟೆ ಕ್ಷೇತ್ರಗಳು ಸಿಗಲಿವೆ.

ರಾಮನಗರ, ಕನಕನಪುರ, ಚನ್ನಪಟ್ಟಣ, ಮಾಗಡಿ, ದೇವನಹಳ್ಳಿ, ಯಶವಂತಪುರ, ನೆಲಮಂಗಲ, ಶಿರಾ, ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು, ಹಿರಿಯೂರು, ಕಡೂರು, ಶೃಂಗೇರಿ, ಮೂಡಿಗೆರೆ, ತರೀಕೆರೆ, ಸಿಂಧನೂರು, ಮಾನ್ವಿ ಕ್ಷೇತ್ರಗಳು ಸಿಗಲಿವೆ.

ದೇವದುರ್ಗ, ಲಿಂಗಸುಗೂರು, ಮಾಲೂರು, ಶ್ರೀನಿವಾಸಪುರ, ಮುಳುಬಾಗಿಲು, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು, ಕೊಳ್ಳೆಗಾಲ, ಗುಂಡ್ಲುಪೇಟೆ, ಶಹಾಪುರ, ಅಫ್ಜಲ್‌ಪುರ, ಯಲಬುರ್ಗಾ, ಕಾರವಾರ, ಸಂಡೂರು, ಹರಿಹರ, ಹಿರೇಕೆರೂರು, ಹೂವಿನಹಡಗಲಿ, ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಗುಬ್ಬಿ, ಗಾಂಧಿನಗರ, ಚನ್ನಗಿರಿ, ಹೊಳಲ್ಕೆರೆ, ಮಹಾಲಕ್ಷ್ಮಿ ಲೇಔಟ್, ಬಿಟಿಎಂ ಲೇಔಟ್, ಬ್ಯಾಟರಾಯನಪುರ, ಹೆಬ್ಬಾಳ, ಶಿರಸಿ, ಪುತ್ತೂರು, ಚಿಕ್ಕಬಳ್ಳಾಪುರ, ಕುಶಾಲನಗರ, ಕೃಷ್ಣರಾಜ, ವರುಣ, ಭದ್ರಾವತಿ, ಹೊನ್ನಾವರ, ಬಾದಾಮಿ, ಹೊಸಪೇಟೆ, ಶಿವಾಜಿನಗರ, ಚಾಮರಾಜಪೇಟೆ ಕ್ಷೇತ್ರಗಳು ಜೆಡಿಎಸ್‌ಗೆ ಸಿಗಲಿವೆ ಎಂದು ಅಂದಾಜಿಸಲಾಗಿದೆ.

ಈ ಕ್ಷೇತ್ರಗಳಲ್ಲಿ ಹಲವು ಕಡೆ ಬಿಜೆಪಿ ಶಾಸಕರಿದ್ದಾರೆ. ಹಾಲಿ ಹಲವು ಕಡೆ ಜೆಡಿಎಸ್ ಪಕ್ಷದ ಶಾಸಕರು ಇದ್ದಾರೆ. ಆದರೆ ಪಕ್ಷಗಳು ಮೈತ್ರಿಮಾತುಕತೆ ಸೀಟು ಹಂಚಿಕೆ ವಿಚಾರ ಬಂದಾಗ ಹಾಲಿ ಶಾಸಕರು ಇರುವ ಕ್ಷೇತ್ರವನ್ನು ಬಿಟ್ಟುಕೊಡಲಿವೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಅಲ್ಲದೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹದಲ್ಲಿರುವ ಬಿಜೆಪಿ ರಾಜ್ಯದ 224 ಕೇವಲ 144 ಸೀಟುಗಳಲ್ಲಿ ಕಣಕ್ಕಿಳಿಯಲು ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಷ್ಟ್ರ ರಾಜಕೀಯಕ್ಕೆ ಹೋದ ಮೇಲೆ ಜೆಡಿಎಸ್ ರಾಜ್ಯದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದೆ. ಪಕ್ಷಕ್ಕೆ ರಾಜ್ಯದಲ್ಲಿ ನಾಯಕರ ಕೊರತೆ ಇದೆ. ನಿಖಿಲ್ ಕುಮಾರಸ್ವಾಮಿ ಮಾತ್ರ ರಾಜ್ಯಾದ್ಯಂತ ಸಂಚಾರ ನಡೆಸುವ ಮೂಲಕ ಪಕ್ಷ ಸಂಘಟನೆ ಮಾಡಲು ಹೋರಾಟ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular