HomeCrimeಗುಟ್ಕಾ ಖರೀದಿಸಿ 10 ರೂ. ನೀಡದ ಗ್ರಾಹಕ; ಪೊಲೀಸರಿಗೆ ಕರೆ ಮಾಡಿದ ಅಂಗಡಿ ಮಾಲೀಕ....!

ಗುಟ್ಕಾ ಖರೀದಿಸಿ 10 ರೂ. ನೀಡದ ಗ್ರಾಹಕ; ಪೊಲೀಸರಿಗೆ ಕರೆ ಮಾಡಿದ ಅಂಗಡಿ ಮಾಲೀಕ….!

ವಿಲಕ್ಷಣ ಘಟನೆಯೊಂದರಲ್ಲಿ ಗುಟ್ಕಾ ಖರೀದಿಸಿ ದುಡ್ಡು ಕೊಡದೇ ಸತಾಯಿಸುತ್ತಿದ್ದ ವ್ಯಕ್ತಿಯ ನಡೆಗೆ ಬೇಸತ್ತ ಅಂಗಡಿಯವನು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

ಕಳೆದ ವರ್ಷ ಗುಟ್ಖಾ ಪ್ಯಾಕೆಟ್ ಖರೀದಿಸಿದ ಗ್ರಾಹಕರಿಂದ 10 ರೂಪಾಯಿ ಪಾವತಿಯಾಗದ ಕಾರಣ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಅಂಗಡಿ ನಡೆಸ್ತಿದ್ದ ಜಿತೇಂದ್ರ ಪೊಲೀಸರಿಗೆ ಕರೆ ಮಾಡಿ ದೂರಿದ್ದಾರೆ.

ಅಂಗಡಿಯಿಂದ ಗುಟ್ಕಾ ಪ್ಯಾಕೆಟ್ ಖರೀದಿಸಿದ ಸಂಜಯ್ ಹಣ ನೀಡುವುದಾಗಿ ಭರವಸೆ ನೀಡಿ ಬಳಿಕ ಎಷ್ಟು ಬಾರಿ ಕೇಳಿದರೂ ಹಣ ನೀಡುತ್ತಿರಲಿಲ್ಲ. ತಿಂಗಳು ಕಳೆದರೂ ಹಣ ನೀಡದೇ ಇದ್ದಿದ್ರಿಂದ ಸಂಜಯ್‌ನ ವರ್ತನೆಯಿಂದ ಹತಾಶೆಗೊಂಡ ಜಿತೇಂದ್ರ ನಂತರ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಪೊಲೀಸರು ಗ್ರಾಮಕ್ಕೆ ಆಗಮಿಸಿ ಅಂಗಡಿಯವನಿಗೆ ಹಣ ವಾಪಸು ಸಿಗುವಂತೆ ಕ್ರಮ ತೆಗೆದುಕೊಂಡರು. ಜಿತೇಂದ್ರ ಮತ್ತು ಸಂಜಯ್ ಇಬ್ಬರೂ ಒಟ್ಟಿಗೆ ನಿಂತಿರುವ ವಿಡಿಯೋ ಕೂಡ ಇದೀಗ ವೈರಲ್ ಆಗಿದ್ದು ವಿಡಿಯೊದಲ್ಲಿ ಜಿತೇಂದ್ರ ಅವರು ಹಣ ವಾಪಸ್ ಪಡೆದಿರುವುದನ್ನು ದೃಢಪಡಿಸಿರುವುದನ್ನು ಕಾಣಬಹುದು.

 

For Latest News Updates, Join Our Whatsapp Community🚩
RELATED ARTICLES

Most Popular