HomeSpecialಬಾಯಿಗೆ ಕಹಿ, ಉದರಕ್ಕೆ ಸಿಹಿ ʼಹಾಗಲಕಾಯಿʼ

ಬಾಯಿಗೆ ಕಹಿ, ಉದರಕ್ಕೆ ಸಿಹಿ ʼಹಾಗಲಕಾಯಿʼ

ಹಾಗಲಕಾಯಿ ಬಾಯಿಗೆ ರುಚಿಯಾಗದಿದ್ದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಆಹಾರದಲ್ಲಿ ಬಳಸುವುದರಿಂದ ಯಾವೆಲ್ಲ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ನೋಡೋಣ.

ಹಾಗಲಕಾಯಿಯನ್ನು ಮಧುಮೇಹಿಗಳು ಸೇವಿಸುವುದರಿಂದ ಸಕ್ಕರೆಯಂಶ ಹೆಚ್ಚಿದ್ದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಇಸುಬು ಮತ್ತು ಸೋರಿಯಾಸಿಸ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಹಾಗಲಕಾಯಿ ಪರಿಣಾಮಕಾರಿ ಮನೆಮದ್ದು. ಚರ್ಮ ವ್ಯಾಧಿ ಮತ್ತು ಚರ್ಮದ ಸೋಂಕುಗಳನ್ನು ಇದು ಇಲ್ಲವಾಗಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತ್ವಚೆಯೊಂದಿಗೆ ಇದು ರಕ್ತ ಶುದ್ಧಿಯನ್ನೂ ಮಾಡುತ್ತದೆ ಎನ್ನಲಾಗಿದೆ. ಹಾಗಾಗಿ ಮೊಡವೆ ಕಲೆ ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಹಾಗಲಕಾಯಿ ಜ್ಯೂಸ್ ನಮ್ಮ ದೇಹದ ವಿಷಕಾರಿ ತ್ಯಾಜ್ಯಗಳನ್ನು ದೂರಮಾಡಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ಒಣಗಿದ ಕಿತ್ತಳೆ ಸಿಪ್ಪೆಯ ಪುಡಿಯೊಂದಿಗೆ ಹಾಗಲಕಾಯಿ ಬೆರೆಸಿ ಪೇಸ್ಟ್ ತಯಾರಿಸಿ ಮುಖದ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ತೊಳೆದರೆ ಮುಖದಲ್ಲಿರುವ ಮೊಡವೆ ಅಥವಾ ಕಲೆಗಳು ಮಾಯವಾಗುತ್ತವೆ.

ಮುಳ್ಳುಸೌತೆಯನ್ನು ಹಾಗಲದೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೂ ಇದೇ ಪರಿಣಾಮ ಕಂಡುಬರುತ್ತದೆ. ಹತ್ತು ನಿಮಿಷದ ಬಳಿಕ ತೊಳೆದರೆ ಸಾಕು. ಹೊಳೆಯುವ ಮುಖ ನಿಮ್ಮದಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular