HomeKarnatakaಜನನ ಮತ್ತು ಮರಣ ನೋಂದಣಿ: ಶುಲ್ಕಗಳು ಎಷ್ಟು?

ಜನನ ಮತ್ತು ಮರಣ ನೋಂದಣಿ: ಶುಲ್ಕಗಳು ಎಷ್ಟು?

ಜನನ ಮತ್ತು ಮರಣದ ನೋಂದಣಿಯ ಕಾಲ ಕಾಲಕ್ಕೆ ತಿದ್ದುಪಡಿಯಾಗುತ್ತದೆ. ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಮರಣ ಮತ್ತು ಜನನ ನೋಂದಣಿಗೆ ಇರುವ ಶುಲ್ಕ ಎಷ್ಟು?, ಎಷ್ಟು ದಿನಗಳ ತನಕ ಉಚಿತವಾಗಿ ನೋಂದಣಿ ಮಾಡಿಸಬಹುದು? ಎಂಬ ಮಾಹಿತಿ ಇಲ್ಲಿದೆ.

ಕೊಪ್ಪಳದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, “ಬದುಕಿರುವ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ತುಂಬಾ ಅಗತ್ಯವಾದ ದಾಖಲೆಯಾಗಿದೆ ಮತ್ತು ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತವಾದ ದಾಖಲೆಯಾಗಿದ್ದು, ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು” ಎಂದು ಹೇಳಿದರು.

ಜಿಲ್ಲಾ ಸಾಂಖ್ಯಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಾಗರೀಕ ನೋಂದಣಿ ಪದ್ದತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಜನನ ಮರಣ ನೋಂದಣಿ ಅಧಿನಿಯಮಗಳು-1969 ಹಾಗೂ `ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999 ರನ್ವಯ ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿದೆ. ನಿಗದಿತ ಅವಧಿಯೊಳಗೆ ಯಾವುದೇ ಶುಲ್ಕವಿಲ್ಲದೆ ಜನನ ಮರಣ ನೋಂದಣಿ ಮಾಡಲು ಅವಕಾಶವಿದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ನಿಗದಿತ ಅವಧಿಯೊಳಗೆ ಜನನ, ಮರಣ ಮಾಹಿತಿಯು ಸಂಬಂಧಿಸಿದ ತಂತ್ರಾಶದಲ್ಲಿ ದಾಖಲಿಸಬೇಕು. ಜನನ-ಮರಣ ನೋಂದಣಿಯನ್ನು ಅಧಿನಿಯಮ ಮತ್ತು ನಿಯಮಗಳಂತೆ ಹಾಗೂ 2024ರ ತಿದ್ದುಪಡಿ ನಿಯಮದಂತೆ ಅನುಷ್ಠಾನಕ್ಕೆ ಕ್ರಮವಹಿಸಬೇಕು. ಶೇ.100 ರಷ್ಟು ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ನೋಂದಾವಣೆ ಆಗಿರುವ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು. ವಿಳಂಭ ನೋಂದಣಿ ಘಟನೆಗಳನ್ನು ತಡೆಯುವ ಬಗ್ಗೆಯೂ ಸಹ ಕ್ರಮ ವಹಿಸಬೇಕು. ಶೇ. 100ರಷ್ಟು ವರದಿ ಸಾಮರ್ಥ್ಯ ಸಾಧಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾರು ನೋಂದಣಿ ಮಾಡುತ್ತಾರೆ?: “ಜನನ ಮತ್ತು ಮರಣ ನೋಂದಣಿ ಕಾರ್ಯವನ್ನು ಜಿಲ್ಲೆಯ ಎಲ್ಲಾ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು ಸರಿಯಾಗಿ ನಿರ್ವಹಿಸಬೇಕು. ನೋಂದಣಿ ವೇಳೆ ಸೂಕ್ತ ಪರಿಶೀಲನೆ ಕೈಗೊಂಡು ಅದರ ವದಿಯನ್ನು ಸಲ್ಲಿಸಬೇಕು. ವಿಳಂಬ ನೋಂದಣಿ ಘಟನೆಗಳನ್ನು ತಡೆಬೇಕು. ಯಾವುದೇ ದಾಖಲಾತಿ ಬಾಕಿ ಉಳಿಯದಂತೆ ಶೇ.100ರಷ್ಟು ನೋಂದಣಿ ಮಾಡುವಂತೆ ಕ್ರಮವಹಿಸಬೇಕು” ಎಂದು ಹೇಳಿದರು.

ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿರುತ್ತದೆ. 21 ದಿವಸಗಳೊಳಗಾಗಿ ಯಾವುದೇ ಶುಲ್ಕವಿಲ್ಲದೆ ಜನನ ಮರಣ ನೋಂದಣಿಯನ್ನು ಮಾಡಲಾಗುವುದು. 2024ರ ತಿದ್ದುಪಡಿ ನಿಯಮದಂತೆ ಜನನ ಮರಣ ಹೆಚ್ಚುವರಿ ಪ್ರಮಾಣ ಪತ್ರಗಳ ಶುಲ್ಕವು ಈಗ ರೂ.50 ಆಗಿರುತ್ತದೆ. ವಿಳಂಬ (ತಡ) ನೋಂದಣಿಗೆ ಘಟನೆ ಸಂಭವಿಸಿದ 21 ದಿನಗಳಿಂದ 30 ದಿನದವರೆಗೆ ಶುಲ್ಕ 20 ಆಗಿರುತ್ತದೆ. ಘಟನೆ ಸಂಭವಿಸಿದ 30 ದಿನಗಳ ನಂತರ ಒಂದು ವರ್ಷದವರೆಗೆ ಶುಲ್ಕ ರೂ. 50 ಆಗಿರುತ್ತದೆ.

ಜನನ ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ 2015ರಿಂದ ಪ್ರಾರಂಭಿಸಲಾಗಿದೆ. ತದನಂತರ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 2018 ರಿಂದ ಸಂಪೂರ್ಣವಾಗಿ ಇ-ಜನ್ಮ ತಂತ್ರಾಂಶದ ಮೂಲಕ ಜನನ ಮರಣ ಘಟನೆಗಳನ್ನು ನೋಂದಣಿ ಮಾಡುವ ಕಾರ್ಯವನ್ನು ಕಡ್ಡಾಯಗೊಳಿಸಲಾಗಿದೆ.

ಎಲ್ಲಾ ನೋಂದಣಾಧಿಕಾರಿಗಳು ಅಥವಾ ಉಪನೋಂದಣಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಸಹಿಯೊಂದಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಬೇಕು. ಜನನ ಮರಣ ನೋಂದಣಿ ಘಟಕಗಳ ಪರಿಶೀಲನೆ ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡಾ 100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ಕಂದಾಯ, ನಗರಾಭಿವೃದ್ಧಿ ಅಥವಾ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ನಡೆಸಬೇಕಾಗಿರುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular