HomeAuto'ಎಕ್ಸ್ ಪ್ರೆಸ್ ವೇ' ನಲ್ಲಿ ಇಂದಿನಿಂದ ಆಟೋ - ಬೈಕ್ ಸಂಚಾರಕ್ಕೆ ನಿರ್ಬಂಧ; ನಿಯಮ ಉಲ್ಲಂಘಿಸಿದರೆ...

‘ಎಕ್ಸ್ ಪ್ರೆಸ್ ವೇ’ ನಲ್ಲಿ ಇಂದಿನಿಂದ ಆಟೋ – ಬೈಕ್ ಸಂಚಾರಕ್ಕೆ ನಿರ್ಬಂಧ; ನಿಯಮ ಉಲ್ಲಂಘಿಸಿದರೆ 500 ರೂ. ದಂಡ

ಆಗಸ್ಟ್​ 1 ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಆಟೋ, ಬೈಕ್ ನಿರ್ಬಂಧ; 6 ತಿಂಗಳಲ್ಲಿ 132 ಮಂದಿ ಸಾವು!- Kannada Prabha

ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇಂದಿನಿಂದ ಆಟೋ, ಬೈಕ್, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ವಾಹನಗಳು, ಟ್ರ್ಯಾಕ್ಟರ್, ಕ್ವಾಡ್ರಿ ಚಕ್ರಗಳ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಅನಧಿಕೃತವಾಗಿ ಈಗಾಗಲೇ ಪ್ರವೇಶವನ್ನು ನಿರ್ಬಂಧಿಸಲಾಗಿತ್ತಾದರೂ ಇದೀಗ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ನಿರ್ಬಂಧ ವಿಧಿಸಲಾಗಿರುವ ವಾಹನಗಳು ಕಡ್ಡಾಯವಾಗಿ ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸಲು ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೊಮ್ಮೆ ನಿಯಮ ಮೀರಿ ಈ ವಾಹನಗಳು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸಿದರೆ 500 ರೂಪಾಯಿ ದಂಡ ಪಾವತಿಸಬೇಕಿದ್ದು, ಇದರ ಪರಿಶೀಲನೆಗಾಗಿ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿಯೇ ಒಟ್ಟು 9 ಕಡೆ ಪೊಲೀಸರಿಂದ ತಪಾಸಣೆ ನಡೆಸಲಾಗುತ್ತದೆ.

ಇನ್ನು ಎಕ್ಸ್ ಪ್ರೆಸ್ ವೇ ನಲ್ಲಿ ಚಲಿಸುವ ವಾಹನಗಳಿಗೂ ವೇಗಮಿತಿಯನ್ನು ನಿಗದಿಪಡಿಸಲಾಗಿದ್ದು, ಎಡ ಭಾಗದಲ್ಲಿ ಸಂಚರಿಸುವ ವಾಹನಗಳು 60 ಕಿ.ಮೀ., ಮಧ್ಯದಲ್ಲಿ ಸಂಚರಿಸುವ ವಾಹನಗಳು 80 ಕಿ.ಮೀ. ಹಾಗೂ ಬಲ ಭಾಗದಲ್ಲಿ ಚಲಿಸುವ ವಾಹನಗಳು 100 ಕಿಲೋಮೀಟರ್ ಗರಿಷ್ಠ ಮಿತಿ ಮೀರದಂತೆ ತಿಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular