ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಗದ್ದೆಯಲ್ಲಿ ಶನಿವಾರ ಅಡಿಕೆ ಮರ ತಲೆ ಮೇಲೆ ಬಿದ್ದು ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿಯ ಗಾಂಧಿನಗರ ನಿವಾಸಿ ಮಾಯಕಣ್ಣ(61) ಮೃತಪಟ್ಟ ವ್ಯಕ್ತಿ. ಮಹೇಶ್ ಎಂಬುವರ ತೋಟದಲ್ಲಿ ಅಡಿಕೆ ಮರಗಳನ್ನು ಕಡಿಯುವಾಗ ಕಾರ್ಮಿಕ ಮಾಯಕಣ್ಣ ತೋಟದ ಪಕ್ಷದ ದಾರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದರು. ಅಡಿಕೆ ಮರ ಅವರ ತಲೆ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

