HomeLatest NewsBIG NEWS: ಇಬ್ಬರು ಹೆಂಡಿರು, 8 ಮಕ್ಕಳನ್ನು ಸಾಕಲು ಬೈಕ್ ಕಳ್ಳತನ ಮಾಡುತ್ತಿದ್ದ ಭೂಪ: ಖತರ್ನಾಕ್...

BIG NEWS: ಇಬ್ಬರು ಹೆಂಡಿರು, 8 ಮಕ್ಕಳನ್ನು ಸಾಕಲು ಬೈಕ್ ಕಳ್ಳತನ ಮಾಡುತ್ತಿದ್ದ ಭೂಪ: ಖತರ್ನಾಕ್ ಕಳ್ಳ ಅರೆಸ್ಟ್!

ಮೈಸೂರು: ಇಬ್ಬರು ಹೆಂಡಿರ ಮುದ್ದಿನ ಗಂಡನೊಬ್ಬ ಬೈಕ್ ಕಳ್ಳತನಕ್ಕೆ ಇಳಿದು ಪೊಲೀಸರ ಅತಿಥಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಅಜ್ಮತ್ ಉಲ್ಲಾ ಬಂಧಿತ ಆರೋಪಿ. ಚಾಮರಾಜನಗರದ ನಿವಾಸಿಯಾಗಿರುವ ಅಜ್ಮತ್ ಉಲ್ಲಾ, ಬೈಕ್ ಕಳ್ಳತನ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ. ಅಜ್ಮತ್ ಉಲ್ಲಾಗೆ ಇಬ್ಬರು ಹೆಂಡತಿಯರು. 8 ಜನ ಮಕ್ಕಳಿದ್ದರು. ಇಬ್ಬರು ಹೆಂಡಿರು, 8 ಮಕ್ಕಳನ್ನು ಸಾಕಲೆಂದೇ ದ್ವಿಚಕ್ರ ವಾಹನ ಕಳ್ಳತನ ಮಾಡಲು ಶುರು ಮಾಡಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಮರಾಜನಗರದಿಂದ ಬಸ್ ನಲ್ಲಿ ಮೈಸೂರಿಗೆ ಬರುತ್ತಿದ್ದ ಅಜ್ಮತ್, ಮೈಸೀರಿನ ವಿಧೆಡೆ ಪಾರ್ಕಿಂಗ್ ಮಾಡಿ ನಿಲ್ಲಿದ್ದ ಬೈಕ್ ಗಳನ್ನು ಮಾಸ್ಟರ್ ಕೀ ಬಳಿಸಿ ಕಳ್ಳತನ ಮಾಡುತ್ತಿದ್ದ ಹೀಗೆ ಕದ್ದ ಬೈಕ್ ಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಕಳೆದ ೭ ತಿಂಗಳಲ್ಲಿ ಬರೋಬ್ಬರಿ 24 ಬೈಕ್ ಗಳನ್ನು ಈತ ಕದ್ದಿದ್ದಾನೆ.

ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬೈಕ್ ಕದಿಯುತ್ತಿದ್ದಾಗಲೇ ಅಜ್ಮತ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಪಾರ್ಕಿಂಗ್ ಮಾಡಿದ್ದ ಬೈಕ್ ಮೇಲೆ ಬಹಳ ಹೊತ್ತು ಕುಳಿತುಕೊಂಡಿದ್ದ. ಅನುಮಾನಗೊಂಡ ಪೊಲೀಸರು ಆತನನ್ನೇ ಗಮನಿಸುತ್ತಿದ್ದರು. ಬೈಕ್ ಕದ್ದು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಪೊಲೀಸರು ಅಜ್ಮತ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular